ಉದಯವಾಹಿನಿ, ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಅದರ ನಿರ್ಮಾಣದೊಂದಿಗೆ ಮಂದಿರ ಸೂರ್ಯ ಚಂದ್ರ ಇರುವವರೆಗೂ ಉಳಿಯುವಂತೆ ಕಾಪಾಡುವುದು ಎಲ್ಲಾ ಹಿಂದೂಗಳ ಕರ್ತವ್ಯವಾಗಿದೆ. ರಾಮಮಂದಿರ ಸಾವಿರಾರು ವರ್ಷಗಳ ಕಾಲ ಇರಬೇಕು .ಈ ಹಿನ್ನೆಲೆಯಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ವಿಶ್ವಸ್ಥ ಮಂಡಳಿ ಸದಸ್ಯ, ಉಡುಪಿ ಪೇಜಾವರ ಮಠದ ಅಧ್ಯಕ್ಷ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಬೆಂಗಳೂರಿನಿಂದ ಘಂಟಾನಾದ ಪರಿಕ್ರಮ ಹೊರಡುತ್ತಿರುವುದು ವಿಶೇಷ ಎಂದಿದ್ದಾರೆ.
ಕಾರ್ಯಕ್ರಮ ಬನಶಂಕರಿ ಒಂದನೇ ಹಂತದಲ್ಲಿರುವ ಬ್ರಹ್ಮ ಚೈತನ್ಯ ಮಂದಿರದಲ್ಲಿ ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗುತ್ತಿರುವ ಶ್ರೀರಾಮ ಮಂದಿರದ ದೇಗುಲಕ್ಕೆ ಘಂಟೆಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಎಲ್ಲೆಲ್ಲೂ ಶ್ರೀರಾಮನ ಘಂಟಾನಾದ ಕೇಳಿಬರುತ್ತಿದೆ. ದೇವಸ್ಥಾನದ ಕನಸು ನನಸಾಗಿದೆ. ಹಿಂದೂಗಳು ಹಿಂದೂಗಳಾಗಿ ಉಳಿದರೆ ಶ್ರೀರಾಮಚಂದ್ರನ ಮಂದಿರ ಉಳಿಯುತ್ತದೆ. ಇದರಿಂದ ರಾಮ ರಾಜ್ಯದ ಕನಸು ನನಸಾಗಲಿದೆ. ದೇಶ ಸೇವೆಗೆ ಎಲ್ಲರೂ ಬದ್ಧರಾಗಿರಬೇಕು. ಆಗ ಮಾತ್ರ ರಾಮರಾಜ್ಯದ ಕನಸು ನನಸಾಗುತ್ತದೆ. ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಶ್ರೀರಾಮ ಮಂದಿರವನ್ನು ಯಾವಾಗಲೂ ಮಂದಿರವಾಗಿ ಇಡಬೇಕು ಎಂದು ಪುನರುಚ್ಚರಿಸಿದರು.
ಅಯೋಧ್ಯೆಯ ಶ್ರೀ ರಾಮ ಮಂದಿರ ಮಂಗಲ ಘಂಟ ಪರಿಕ್ರಮ ಯಾತ್ರೆಯ ನಿಮಿತ್ತ ಧಾರ್ಮಿಕ ಹೋಮ ಹವನ ಹಾಗೂ ಶ್ರೀ ರಾಮ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಮಧ್ಯ ಪ್ರಾದೇಶಿಕ ಕೆಲಸ. ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ೧೫ ದೊಡ್ಡ ಗಂಟೆಗಳು, ೨೦ ಚಿಕ್ಕ ಪೂಜೆ ಗಂಟೆಗಳನ್ನು ಸಮರ್ಪಿಸಲಾಗುತ್ತಿದೆ. ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಬಳಸಲು ೩೮ ಕೆಜಿ ಬೆಳ್ಳಿ ಅಭಿಷೇಕ ಸಾಮಗ್ರಿ, ದೀಪಗಳು ಮತ್ತು ಪೂಜಾ ಸಾಮಗ್ರಿಗಳನ್ನು ಶನಿವಾರ ಇಲ್ಲಿಂದ ವಿಶೇಷ ವಾಹನದಲ್ಲಿ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ. ನಾಲ್ಕು ದಿನಗಳ ನಂತರ ಅವುಗಳನ್ನು ಅಯೋಧ್ಯೆ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಸೇವೆಯ ರೂಪದಲ್ಲಿ ಸಾಮಗ್ರಿಗಳನ್ನು ಒದಗಿಸುತ್ತಿರುವ ರಾಜೇಂದ್ರ ನಾಯ್ಡು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!