ಉದಯವಾಹಿನಿ, ಬೀದರ: ಭಾರತೀಯ ಭೀಮ ಸೇನಾದ ವತಿಯಿಂದ ಬಿ. ಶಾಮಸುಂಡರ್ ರವರ 115ನೇ ಜನ್ಮ ದಿನಾಚರಣೆಯನ್ನು ಬೀದರ್ ನಗರದ ಮುಖ್ಯರಸ್ತೆಯಲ್ಲಿರುವ ಬಿ. ಶಾಮಸುಂದರ ಸ್ಮಾರಕ್‍ದಲ್ಲಿ ಬಿ. ಶಾಮಸುಂದರ ಅವರ ಪ್ರತಿಮೆಗೆ ಹೂಮಾಲೆ ಹಾಕುವ ಮೂಲಕ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷರಾದ ಎಂ ಡಿ ಗೌಸೋದ್ದಿನ್ ರವರು ಮಾತನಾಡಿ ಮಹಾÀ ಪುರುಷರ ವಿಚಾರಗಳು ತಮ್ಮ ಜೀವನದಲ್ಲಿ ಅಳಡಿಸಿಕೊಳ್ಳಬೇಕೆಂದು ಹಾಗೂ ಸ್ವಾತಂತ್ರ ಪೂರ್ವದಲ್ಲಿ ಹೈದ್ರಾಬಾದ ಸಂಸ್ಥಾನದ ಶೋಷಿತ ಸಮಾಜದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕøತಿಕ ಏಳಿಗೆಗಾಗಿ ಹೋರಾಟ ಮಾಡಿರುತ್ತಾರೆ ಎಂದು ಹೆಳಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿ ಕಾಳೆ ವಹಿಸಿದ್ದರು, ಅತಿಥಿ ಗಳಾಗಿ ವಿಠಲದಾಸ ಪ್ಯಾಗೆ, ಸುಮಂತ್ ಕಟ್ಟೀಮನಿ, ಅಶೋಕ ಕುಮಾರ್ ಮಾಲ್ಗೆ, ತಲಾ ಹಾಷ್ಮಿ, ಸುರೇಶ್ ಶಿಂದೆ, ಮಹದೇವ್ ಕಾಂಬ್ಳೆ, ಸುರೇಶ್ ತಾಳೆ, ಬಕ್ಕಪ್ಪ ದಂಡಿನ್, ಓಂಕಾರ್ ಶಿಂದೆ, ಸಂಜು ಸಾಗರ್, ಧನ ಶೇಟಿ, ಸುಂದರ , ಶಿವರಾಜ್ ಧನಕೆ, ದಿಲೀಪ್ ಬೋಸ್ಲೆ, ಮುಕೇಶ್, ನಗರದ ಅನೇಕ ಕಡೆಯಿಂದ ಮಹಿಳೆಯರು, ಪುರುಷರು ಭಾಗಿಯಾಗಿದ್ದರು, ಪೂಜ್ಯ ಭಂತೆ ಆಶೀರ್ವಚನ ನೀಡಿದರು.

Leave a Reply

Your email address will not be published. Required fields are marked *

error: Content is protected !!