ಉದಯವಾಹಿನಿ, ಚಿಕ್ಕಮಗಳೂರು: ಕಾಂಗ್ರೆಸ್ ದಲಿತರನ್ನ ಬರೀ ಹೇಳೋಕೆ,ತೋರಿಸೋಕೆ ಇಟ್ಟುಕೊಂಡಿದೆ ಅಷ್ಟೆ. ಇಂದಿನ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 50 ಸ್ಥಾನ ಗೆಲ್ಲೋದೆ ಕಷ್ಟ. ಅವರಪ್ಪನಾ ಆಣೆ ಮಲ್ಲಿಕಾರ್ಜುನ ಖರ್ಗೆ ಅವರನ್ನ ಪ್ರಧಾನಿ ಮಂತ್ರಿ ಮಾಡಲ್ಲ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.
ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 50 ಸ್ಥಾನ ಗೆಲ್ಲೋದೆ ಕಷ್ಟ. ಇಂತಹಾ ಸ್ಥಿತಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಮಾಡ್ತೀವಿ ಅಂದ್ರೆ, ಮಾಡಲ್ಲ. ಮೂರು ಲೋಕಕ್ಕೂ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಅಧ್ಯಕ್ಷರನ್ನಾಗಿ ಮಾಡಲಿ. ಪಾತಾಳ, ದೇವ, ಭೂಲೋಕ ಮೂರಕ್ಕೂ ಅವರನ್ನೇ ಮಾಡಲಿ ಎಂದರು. ಮೆಜಾರಿಟಿ ಬಂದಾಗ ಮಾಡಿದ್ದಾರಾ.? ಕರ್ನಾಟಕಲ್ಲಿ ಮೆಜಾರಿಟಿ ಇದ್ದಾಗ ಸಿಎಂ ಮಾಡಿದ್ರಾ? ಏಕೆ ಪರಮೇಶ್ವರ್ ಅವರನ್ನ ಸಿಎಂ ಮಾಡಬಾರದಿತ್ತು. ದಲಿತರನ್ನ ಕಾಂಗ್ರೆಸ್ ಬರೀ ತೋರಿಸಕ್ಕೆ, ಹೇಳಕ್ಕೆ ಇಟ್ಕಂಡಿದೆ ಅಷ್ಟೆ. ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಮುಖ್ಯಮಂತ್ರಿಯನ್ನೇ ಮಾಡ್ಲಿಲ್ಲ. ಪ್ರಧಾನಿ ಮಾಡುತ್ತಾರಾ ಎಂದು ಪ್ರಶ್ನಿಸಿದ ಅವರು, ಪರಮೇಶ್ವರ್ ಅವರು ಎಲ್ಲಿ ಸಿಎಂ ಆಗ್ತಾರೋ ಅಂತ ಷಡ್ಯಂತ್ರ, ಹಣ, ಜಾತಿಯಿಂದ ಸೋಲಿಸಿದರು. ಚುನಾವಣೆ ಪೂರ್ವ ಡಿ ಕೆ ಶಿವಕುಮಾರ್ ಅವರೇ ಖರ್ಗೆ ಸಿಎಂ ಆಗಲಿ ಎಂದಿದ್ರು. ಸುಮಾರು ಜನ ಅವರ ಮಾತನ್ನ ನಂಬಿ ಮಲ್ಲಕಾರ್ಜುನ್ ಖರ್ಗೆ ಸಿಎಂ ಆಗ್ತಾರೆ ಅಂತ ಓಟು ಹಾಕಿದ್ರು. ಮೆಜಾರಿಟಿ ಬಂದ ಮೇಲೆ ಖರ್ಗೆ ಅವರು ಇಲ್ಲ. ಖರ್ಗೆ ಅವರ ಹೆಸರೂ ಇಲ್ಲ. ಮೆಜಾರಿಟಿ ಬಂದ ಕಡೆಯೇ ಸಿಎಂ ಮಾಡ್ಲಿಲ್ಲ ಎಂದು ಹೇಳಿದರು.
