ಉದಯವಾಹಿನಿ,ವಿಜಯಪುರ, : ಕರ್ನಾಟಕದ ಗೆಲುವು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಯಾವ ‘ಯಪ್ಪ’ನಿಂದಲೂ ಸಾಧ್ಯವಿಲ್ಲ. ಇವರ ಮುಖ ನೋಡಿ ಯಾರೂ ವೋಟ್ ಹಾಕಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ದೆಹಲಿಗೆ ಯಾರ ಭೇಟಿಗೂ ಹೋಗಿಲ್ಲ.
ನಾನು ಯಾರ ಅಪೈಂಟ್ಮೆಂಟ್ ಕೇಳಿಲ್ಲ, ನನಗೆ ಯಾರ ಅಪೈಂಟ್ಮೆಂಟ್ ಅವಶ್ಯಕತೆ ಇಲ್ಲನಾನು ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಕಾರ್ಖಾನೆ ಕೆಲಸಕ್ಕೆ ಹೋಗಿದ್ದೆ. ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಹಾಗೂ ಇತರೆ ಕೆಲ ಸಂಸದರನ್ನು ಭೇಟಿಯಾಗಿದ್ದೇನೆ ಎಂದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಕಿಡಿಕಾರಿದ ಯತ್ನಳ್, ವಿಜಯೇದ್ರ ನನ್ನ ಬೇಕಾದಷ್ಟು ಹೊಗಳಿ …….. ಎಂದ ಯತ್ನಾಳ್. ವಿಜಯೇಂದ್ರ ಇರುವುದರಿಂದ 35 ಲೋಕಸಭಾ ಸೀಟ್ ಗಳು ಬರುತ್ತವೆ ಎಂದು ಹೊಗಳಿ ನನ್ನದೇನು ಗಂಟು ಹೋಗುತ್ತದೆ. ಇರುವ 28 ಕ್ಷೇತ್ರಗಳಿದ್ದರೂ 35 ಕ್ಷೇತ್ರಗಳು ಇವೆ ಎಂದು ಹಾಕಿರಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆಯೇ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಯಾ ಯಪ್ಪಂದು ಏನು ಇಲ್ಲ ಇವರ ಮುಖ ನೋಡಿ ಯಾರು ಮತ ಹಾಕಲ್ಲ ಎಂದರು. ನನ್ನ ಹೋರಾಟ ವಂಶವಾರು, ಭ್ರಷ್ಟಾಚಾರ ಹಾಗೂ ಅಡ್ಜೆಸ್ಟಮೆಂಟ್ ಈ ಮೂರರ ವಿರುದ್ಧ. ಇವುಗಳ ಕುರಿತು ನನ್ನ ಹೋರಾಟ ನಿರಂತರವಾಗಿರುತ್ತದೆ.
