ಉದಯವಾಹಿನಿ ದಾವಣಗೆರೆ: ಇಲ್ಲಿನ ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜನ್ಮದಿನ ಸಮಾರಂಭಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು.ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಕನ್ನಡದ ಚಿತ್ರಗೀತೆಗಳ ಸಂಗೀತಕ್ಕೆ ಹುಚ್ಚೆದ್ದು ಕುಣಿದರು.ಮಲ್ಲಿಕಾರ್ಜುನ್ ಜನ್ಮದಿನ ಸಮಾರಂಭಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು.ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಕನ್ನಡದ ಚಿತ್ರಗೀತೆಗಳ ಸಂಗೀತಕ್ಕೆ ಹುಚ್ಚೆದ್ದು ಕುಣಿದರು. ನಟ ದರ್ಶನ್ ಸಾಥ್ ನೀಡಿ ಅಭಿಮಾನಿಗಳನ್ನು ರಂಜಿಸಿದರು.ವೇದಿಕೆ ಎದುರು ಕಿಕ್ಕಿರಿದು ಸೇರಿದ್ದ ಜನರು ನಟ ದರ್ಶನ್ ನೋಡಲು ಮುಗಿಬಿದ್ದರು. ನಿರೂಪಕರು ದರ್ಶನ್ ಹೆಸರು ಹೇಳಿದಾಗಲೆಲ್ಲ ಅಭಿಮಾನಿಗಳು ‘ಡಿ ಬಾಸ್.. ಡಿ ಬಾಸ್’ ಎಂದು ಕೂಗಿದರು.ನೂಕು ನುಗ್ಗಲು, ತಳ್ಳಾಟದಿಂದಾಗಿ ಮಹಿಳೆಯರು, ಯುವತಿಯರು ಪರದಾಡಿದರು. ನೂಕು ನುಗ್ಗಲು ತಡೆ ಯಲು ಪೊಲೀಸರು, ಕಾರ್ಯಕ್ರಮದ ಆಯೋಜಕರು, ನಿರೂಪಕರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.ಅಭಿಮಾನಿಗಳು ಸಂಗೀತ ಕಾರ್ಯಕ್ರಮ, ಕಾಮಿಡಿ ಕಾರ್ಯಕ್ರಮ ನೀಡಲು ಬಂದ ಕಲಾವಿದರಿಗೂ ವೇದಿಕೆ ಹತ್ತಲು ಅವಕಾಶವಾಗದಂತೆ ಕಿಕ್ಕಿರಿದು ಸೇರಿದ್ದರು.ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ನೇತೃತ್ವದ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಗಾಯಕರಾದ ಹೇಮಂತ್, ಅನಿರುದ್ಧ್, ಇಂದು ನಾಗರಾಜ್, ಶ್ರೀರಾಮ್ ಕಾಸರ್ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರಾದ ನಯನ, ಅಪ್ಪಣ್ಣ, ದಾನಪ್ಪ, ಸಂಜು ಬಸಯ್ಯ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.