ಉದಯವಾಹಿನಿ, ಕೋಲಾರ: ರಾಮ ಮಂದಿರ ಭಾರತ ದೇಶದ ಜನತೆಯ ಸ್ವತ್ತು. ಇದು ಯಾವೂದೇ ಪಕ್ಷಕ್ಕೆ, ಯಾವೂದೇ ಸಮುದಾಯದ ಧರ್ಮಕ್ಕೆ ಸೇರಿದ್ದಲ್ಲ, ಆಯೋಧ್ಯೆಗೆ ಯಾರೂ ಬೇಕಾದರೂ ಹೋಗ ಬಹುದಾಗಿದೆ. ಹೋಗದೆ ಇರಬಹುದಾಗಿದೆ, ನನಗೇನಾದರೂ ಆಹ್ವಾನ ಬಂದಿದ್ದರೆ ನಾನು ಖಂಡಿತವಾಗಿಯೂ ಹೋಗುತ್ತಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು,
ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಭಾರತ ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಯೂ ರಾಮ ಭಕ್ತರೇ ಎಲ್ಲರೂ ರಾಮ ಭಕ್ತರಾಗುವುದರಲ್ಲಿ ಯಾವೂದೇ ಅಪರಾಧ ಅಥಾವ ತಪ್ಪು ಇಲ್ಲ. ಅದರೆ ಬಿಜೆಪಿ ಪಕ್ಷದವರು ಮಾತ್ರ ರಾಮಭಕ್ತರು ಜೆ.ಡಿ.ಎಸ್. ಮತ್ತು ಕಾಂಗ್ರೇಸ್ ಪಕ್ಷದವರು ರಾಮ ಭಕ್ತರಲ್ಲ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ತಪ್ಪು ಎಂದು ಪ್ರತಿಪಾದಿಸಿದರು,
ನಾವೂ ಸಹ ಮೊದಲಿನಿಂದಲೂ ರಾಮ ಭಕ್ತರೆ, ಜ,೨೨ ರಂದು ಮಾತ್ರ ರಾಮನ ಪೂಜೆ ಮಾಡುವುದಿಲ್ಲ, ದಿನ ನಿತ್ಯವು ಮನೆಯಲ್ಲಿ ರಾಮನ ಪೂಜೆಯನ್ನು ಮಾಡುತ್ತಿದ್ದೇವೆ. ಮುಜರಾಯಿ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ಮಾಡ ಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಳಬಾಗಿಲು ಅವನಿಯಲ್ಲಿ ವಾಲ್ಮೀಕಿ ಮಹರ್ಷಿ ಇದ್ದದ್ದು ಇದು ನಮ್ಮ ಕೋಲಾರದ ಐತಿಹಾಸಿಕವಾಗಿದೆ ಎಂದರು,
ನಮ್ಮ ಭಾರತವು ಜಾತ್ಯಾತೀತ ದೇಶವಾಗಿದೆ. ಮಂದಿರ, ಮಸೀದಿ, ಚರ್ಚ್‌ಗಳಿಗೆ ಸಾರ್ವಜನಿಕರು ಹೋಗುವುದಕ್ಕೆ ಯಾವೂದೇ ನಿರ್ಬಂಧಗಳಿಲ್ಲ. ಆಯಾಯಾ ಸಮುದಾಯದ ಭಕ್ತಾಧಿಗಳು ಪ್ರಾರ್ಥಿಸುವುದು, ಪೂಜಿಸುವುದು ಅವರ ಇಚ್ಚೆಗೆ ಬಿಟ್ಟಿದ್ದಾಗಿದೆ, ನಾನು ಚರ್ಚ್‌ಗೊ ಹೋಗುತ್ತೇನೆ, ಮಸೀದಿಗೂ ಹೋಗುತ್ತೇನೆ.
