ಉದಯವಾಹಿನಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಗದ್ದಿಕೆರೆ ಗ್ರಾಮದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗದ್ದಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲವಾದಿ ರಮೇಶ್ ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರು ವಿಕಲಚೇತನರ ವೇತನಕ್ಕಾಗಿ ವಿಧವಾ ವೇತನ ವೃದಾಪ್ಯ ವೇತನಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಪದೆ ಪದೇ ಹೋಗುವ ಅಲೆದಾಟ ತಪ್ಪಿಸಿಅಗತ್ಯ ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದರು. ಈ ವೇಳೆ ಗದ್ದಿಕೆರೆ,ಜಿ. ಕೋಡಿಹಳ್ಳಿ, ಸಾಲ್ಮೋರಳ್ಳಿ ಗ್ರಾಮಗಳ 15 ಕ್ಕೂ ಹೆಚ್ಚು ಜನರಿಗೆ ವಿಕಲಚೇತನರ, ವೃದ್ಯಾಪ್ಯ ಹಾಗೂ ವಿಧವಾ ವೇತನಗಳ ಆದೇಶ ಪ್ರತಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಶಂಕರಯ್ಯ, ಗ್ರಾ ಪಂ ಸದಸ್ಯರಾದ ಪೂಜಾರ್ ಸುರೇಶ್, ಮೇಗೇರಿ ರಾಮರೆಡ್ಡಿ, ಹೆಚ್ ಜಿ ಬಸವನಗೌಡ, ಜೆಎಂ ನಾಗರತ್ನ ಸಣ್ಣಬಸಯ್ಯ,ಲತಾ ಭೀಮರೆಡ್ಡಿ, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಗ್ರಾಮದ ಮುಖಂಡರು ನಾಗರಿಕರು ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

error: Content is protected !!