ಉದಯವಾಹಿನಿ ರಾಮನಗರ ಜಿಲ್ಲೆಯಲ್ಲಿ 20 ವರ್ಷಗಳ ನಂತರ ಪ್ರವಾಹ ಬಂದು ಅನೇಕ ರಸ್ತೆಗಳು, ಮನೆಗಳು ಹಾಳಾಗಿದ್ದು ಪೌರಕಾರ್ಮಿಕರ ಶ್ರಮದಿಂದ ಪುನಃ ನಗರವು ಸ್ಚಚ್ಚಗೊಂಡಿರುವುದು ಸಂತೋಷದ ವಿಷಯ. ಸ್ವಚ್ಚತೆ ವಿಚಾರದಲ್ಲಿ ಪೌರಕಾರ್ಮಿಕರು ಶ್ರಮ ಶ್ಳಾಘನೀಯವಾದುದು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.ಅವರು ಶುಕ್ರವಾರ ರಾಮನಗರ ನಗರಸಭೆ, ಕರ್ನಾಟಕ ರಾಜ್ಯ ಪೌರಾಸೇವಾ ನೌಕರರ ಸೇವಾ ಸಂಘದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ “ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ -2022” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪೌರಕಾರ್ಮಿಕರು ಪ್ರತಿದಿನ ಬೆಳಿಗಿನ ಜಾವ 4 ಗಂಟೆಯಿAದ 11 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತಾರೆ. ಪೌರಕಾರ್ಮಿಕರು ಕೆಲಸದ ಒತ್ತಡದಿಂದ ಧೂಮಪಾನ, ಮದ್ಯಪಾನ ದುಶ್ಚಟಗಳಿಗೆ ಒಳಗಾಗಬಾರದು ಎಂದು ತಿಳಿಸಿದರು.ಪೌರಕಾರ್ಮಿಕರು ಕೆಲಸ ಮುಗಿದ ನಂತರ ವಿಶ್ರಾಂತಿಯನ್ನು ಪಡೆದು ನಂತರ ಬಿಡುವಿನ ಕಾಲದಲ್ಲಿ ದಿನಪತ್ರಿಕೆಗಳನ್ನು ಓದುವುದು, ಕುಟುಂಬದೊಂದಿಗೆ ಸಮಯ ಕಳೆಯುವುದು, ಮಕ್ಕಳಿಗೆ ಪಾಠ ಹೇಳಿಕೊಡುವುದು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಸಾಯಂಕಾಲ ನಿಮ್ಮ ಸ್ನೇಹಿತರೊಂದಿಗೆ ಒಳ್ಳೆಯ ವಿಚಾರಗಳು ವಿನಮಯ ಮಾಡಿಕೊಂಡು ಹೆಚ್ಚು ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ರಾಮನಗರ ತಾಲ್ಲೂಕು ತಹಶೀಲ್ದಾರ್ ಎಂ.ವಿಜಯ್ ಕುಮಾರ್, ರಾಮನಗರ ನಗರ ಸಭಾ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸತೀಶ್.ಕೆ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪೌರಾಕಾರ್ಮಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!