ಉದಯವಾಹಿನಿ, ಹೊಸಪೇಟೆ : ಹೊಸಪೇಟೆಯ ತಳವಾರ ಕೇರಿ ನಿವಾಸಿ ಪೂಜಾರಿ ಯಲ್ಲೇಶಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ತನ್ನ 32ನೇ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪದವಿಯನ್ನು ಪ್ರಧಾನ ಮಾಡಿದೆ.
ಅಭಿವೃದ್ಧಿ ಅಧ್ಯಯನ ವಿಭಾಗದ ಡಾ.ಎ.ಶ್ರೀಧರ ಮಾರ್ಗದರ್ಶನದಲ್ಲಿ ಮೀಸಲು ಪ್ರಾತಿನಿಧ್ಯ ಮತ್ತು ಅಭಿವೃದ್ಧಿ ಪರಿಶಿಷ್ಟ ಪಂಗಡದವರ ರಾಜಕೀಯ ಮೀಸಲು ಕ್ಷೇತ್ರದಲ್ಲಿ ಅನುಲಕ್ಷಿಸಿ ಎಂಬ ಅಧ್ಯಯನಕ್ಕೆ ಪದವಿ ನೀಡಲಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಪಿಎಚ್‍ಡಿ ಪ್ರಧಾನ ಮಾಡಿದರು. ಆಂದ್ರಪ್ರದೇಶದ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎಸ್. ಕೋರಿ, ಕುಲಪತಿ ಡಾ.ಪರಮಶಿವಮೂರ್ತಿ, ಕುಲಸಚಿವ ಡಾ. ವಿಜಯ್ ಪೂಜಚ್ಚ ತಂಬಂಡ ಸೇರಿದಂತೆ ವಿವಿಧ ನಿಕಾಯಗಳ ಡೀನ್‍ರು ಹಾಜರಿದ್ದರು.
