ಉದಯವಾಹಿನಿ, ಹೊಸಪೇಟೆ:  ಮಕ್ಕಳು ಶೈಕ್ಷಣಿಕವಾಗಿ ಬೆಳೆದಂತೆ ವ್ಯವಹಾರಿಕವಾಗಿಯೂ ಬೆಳೆದು ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಈ ಕಾರ್ಯಕ್ಕೆ ಶಿಕ್ಷಣ ಸಂಸ್ಥೆಗಳ ಶ್ರಮ ಮುಖ್ಯವಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಹೇಳಿದರು.
ಹೊಸಪೇಟೆಯ ಜೇಸೀಸ್ ಶಿಕ್ಷಣ ಸಂಸ್ಥೆ ತನ್ನ 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಯಾಗಿ ಹಮ್ಮಿಕೊಂಡ ಕಾರ್ನಿವಲ್ ಏರ್ಪಡಿಸಿದ್ದ ಕ್ರೀಡಾ ಚಟುವಟಿಕೆ, ಆಕರ್ಷಕ ತಿಂಡಿ ತಿನಸುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯವಹಾರ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳು ಶೈಕ್ಷಣಿಕದ ಜೊತೆ ವ್ಯವಹಾರಿಕ ಜ್ಞಾನವನ್ನು ಬೆಳೆಸಬೇಕಾಗಿದೆ, ಪಠ್ಯದ ಜೊತೆ ಇಂತಹ ಕಾರ್ಯಕ್ರಮಗಳು ಅವರಿಗೆ ಅನುಕೂಲವಾಗಲಿದ್ದು ಪ್ರತಿಯೊಬ್ಬರು ಅವಕಾಶಗಳನ್ನು ಬಳಸಿಕೊಂಡು ಬೆಳೆಯಬೇಕು ಎಂದರು.
ನಗರಸಭಾ ಸದಸ್ಯ ತಾರಿಹಳ್ಳಿ ಜಂಬೂನಾಥ ಮಾತನಾಡಿ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ನನ್ನ ಬೆಳವಣಿಗೆಯಲ್ಲಿ ಶಿಕ್ಷಣ ಸಂಸ್ಥೆಯ ಪಾತ್ರವನ್ನು ಸ್ಮರಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ, ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಹೆಚ್.ಗುರುಬಸವರಾಜ್, ಕಾರ್ಯದರ್ಶಿ ಬಿ.ವಿ.ಭಟ್ ಹಾಗೂ ಮುಖ್ಯೋಪಧ್ಯಾಯರಾದ ವಾಣಿಶ್ರೀ ಕುಲಕರ್ಣಿ ಭಾಗವಹಿಸಿದ್ದರು. ಡಿ.ಜಿ.ವಾಣಿಯವರ ಪ್ರಾರ್ಥನೆಯೊಂದಿಗೆ ಎಂ. ಜ್ಯೋತಿಯವರು ಸ್ವಾಗತ ಕೊರುತ್ತಾ ಪ್ರಾಸ್ತವಿಕ ನುಡಿಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ವಾಣಿಶ್ರೀ.ಡಿ.ಕುಲಕರ್ಣಿ ಆಡಿದರೆ ರೆಹನಾ ಬೇಗಂ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!