ಉದಯವಾಹಿನಿ, ಚಿಕ್ಕಮಗಳೂರು,: ಗಂಡು ಕರುವಿಗೆ ಜನ್ಮ ನೀಡಿದ ಎಮ್ಮೆ ೮ ದಿನಗಳ ನಂತರ ಮತ್ತೊಂದು ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರದಿಯಾಗಿದೆ.
ಎನ್.ಆರ್.ಪುರ ತಾಲೂಕಿನ ಶಂಕರಪುರ ಸಮೀಪದ ಮಡುಬ ರಸ್ತೆಯಲ್ಲಿರುವ ಹಳಿಯೂರಿನ ಸುಧಾಕರ ಗೌಡ ಎಂಬುವರಿಗೆ ಸೇರಿದ ಎಮ್ಮೆಯೊಂದು ವಾರದ ಹಿಂದೆ ಗಂಡು ಕರುವಿಗೆ ಜನ್ಮ ನೀಡಿದೆ .ವಿಚಿತ್ರವೆಂದರೆ ಮಂಗಳವಾರ ಬೆಳಗ್ಗೆ ಮತ್ತೊಂದು ಗಂಡು ಕರು ಹಾಕಿದೆ.
ಈ ಘಟನೆಯಿಂದ ಅಚ್ಚರಿಗೊಂಡ ಸುಧಾಕರ್, ಹಲವು ವರ್ಷಗಳಿಂದ ಹಸುಗಳನ್ನು ಸಾಕುತ್ತಿದ್ದೇನೆ, ಸಾಮಾನ್ಯವಾಗಿ ಒಂದು ಹಸು ಒಂದೇ ದಿನದಲ್ಲಿ ಎರಡು ಕರುಗಳಿಗೆ ಜನ್ಮ ನೀಡುತ್ತದೆ.ಆದರೆ ಈ ಎಮ್ಮೆ ಒಂದು ಕರುವಿಗೆ ಜನ್ಮ ನೀಡಿತು ಮತ್ತು ಎಂಟು ದಿನಗಳ ನಂತರ ಮತ್ತೊಂದು ಕರುವಿಗೆ ಜನ್ಮ ನೀಡಿತು ಎಮ್ಮೆಗೆ ಕೃತಕವಾಗಿ ಗರ್ಭಧಾರಣೆ ಮಾಡಲಾಗಿಲ್ಲ. ಈ ಬಗ್ಗೆ ಈಗಾಗಲೇ ಪಶು ಇಲಾಖೆ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ. ತಾಲೂಕು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವಕುಮಾರ್ ಪ್ರತಿಕ್ರಿಯಿಸಿ,ಜಿಲ್ಲೆಯಲ್ಲಿ ಇಂತಹ ಪ್ರಕರಣ ನಡೆಯುತ್ತಿರುವುದು ಇದೇ ಮೊದಲು, ಹಂದಿಗಳು ಸಾಮಾನ್ಯವಾಗಿ ಒಂದು ಹೆರಿಗೆಯ ನಂತರ ಒಂದು ವಾರದ ನಂತರ ಜನ್ಮ ನೀಡುತ್ತವೆ. ಹಸುಗಳು ಮತ್ತು ಎಮ್ಮೆಗಳು ಒಂದೇ ದಿನದಲ್ಲಿ ಕರು ಹಾಕುತ್ತವೆ, ಇದು ಅಪರೂಪ, ನಾನು ಸ್ಥಳಕ್ಕೆ ಹೋಗಿ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.
