ಉದಯವಾಹಿನಿ ಚಿತ್ರದುರ್ಗ: ಭದ್ರಾ ಮೇಲ್ದಂಡೆಗೆ ಅನುದಾನ ಒದಗಿಸುವ ವಿಚಾರದಲ್ಲಿ ಕೇಂದ್ರ ಬಜೆಟ್ ನಲ್ಲಿ ಯಾವುದೇ ವಿಷಯ ಪ್ರಸ್ತಾಪವಾಗದಿರುವುದಕ್ಕೆ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಕಳೆದ ಬಜೆಟ್ ನಲ್ಲಿ ಭದ್ರಾ ಮೇಲ್ಡಂಡೆಗೆ 5300 ಕೋಟಿ ರುಪಾಯಿ ಅನುದಾನ ಘೋಷಣೆ ಮಾಡಿದ್ದು ವರ್ಷ ಕಳೆದರೂ  ಒಂದು ಪೈಸೆ ಹಣ ಬಿಡುಗಡೆಯಾಗಿಲ್ಲ. ಭದ್ರಾ ಮೇಲ್ಡಂಡೆ ಬದಲು ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆ ಅಗ್ಜಿಲರೇಟೆ್ಡ್  ಇರಿಗೇಷನ್  ಬೆನಿಫಿ್ಟ್  ಪ್ರೋಗ್ರಾಮ್ (PMKSY_AIBP) ಅಡಿ ಅನುದಾನ ಒದಗಿಸುವುದಾಗಿ ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿತ್ತು. ಈ ಬಗ್ಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡ ಕೇಂದ್ರಕ್ಕೆ ಪತ್ರ ಬರೆದು ಅನುದಾನ ಬಿಡುಗಡೆಗೆ ಮನವಿ ಮಾಡಿದ್ದರು. ವರ್ಷಗಳು ಉರುಳಿದರೂ ಹಣ ಬಿಡುಗಡೆಯಾಗಿಲ್ಲ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಈ ಬಗ್ಗೆ ಜಿಲ್ಲೆಯ ಜನತೆ ಮುಂದೆ ಸ್ಪಷ್ಟನೆ ನೀಡಬೇಕು ಎಂದು ಸಮಿತಿ ಆಗ್ರಹಿಸಿದೆ. ಒಮ್ಮೆ ಬಜೆಟ್ ನಲ್ಲಿ ಘೋಷಣೆಯಾದರೆ ಮತ್ತು ಈ ವಿಷಯ ಪ್ರಸ್ತಾಪವಾಗುವುದಿಲ್ಲವೆಂಬ ಸಂಗತಿ ಸಮಿತಿಗೆ ಗೊತ್ತಿದೆ. ಆದರೆ  ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆ ಅಗ್ಜಿಲರೇಟೆ್ಡ್  ಇರಿಗೇಷನ್  ಬೆನಿಫಿ್ಟ್  ಪ್ರೋಗ್ರಾಮ್ ಅಡಿಯಾದರೂ ಅನುದಾನ ಒದಗಿಸುವ ಭರವಸೆಯನ್ನು ಕೇಂದ್ರ ಬಜೆಟ್ ನಲ್ಲಿ  ನೀಡಬೇಕಾಗಿತ್ತು. ಅದು ಸಾಧ್ಯವಾಗದೇ ಹೋಗಿದೆ. ಪ್ರಧಾನ ಮಂತಿ ನರೇಂದ್ರ ಮೋದಿ ತಕ್ಷಣವೇ ಕಳೆದ ಬಜೆಟ್ ಘೋಷಣೆಯ 5300ಕೋಟಿ ರು ಅನುದಾನ ಬಿಡುಗಡೆ ಮಾಡಬೇಕು. ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪೂರಕ ದಾಖಲೆಗಳ ಪೂರೈಕೆ ಮಾಡುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!