ಉದಯವಾಹಿನಿ ಗದಗ: ಸೊರಟೂರ ಗ್ರಾಮದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಸ್ ಬಿ ಗೌಡ ನಾಯಕ್ ಶಿಕ್ಷಕರು ಉಪ ಪ್ರಾಚಾರ್ಯರಾಗಿ  ಮುಂಬಡ್ತಿ ಪಡೆದು ವರ್ಗಾವಣೆಗೊಂಡರು .
ಸೊರಟೂರು ಗ್ರಾಮದ ಶ್ರೀ ಜಗದ್ಗುರು ಅನ್ನದಾನೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ 13 ವರ್ಷಗಳ ವರೆಗೆ ಸಮಾಜ ವಿಜ್ಞಾನ ಶಿಕ್ಷಕರಾಗಿ ಹಾಗೂ ಐದು ವರ್ಷಗಳ ಕಾಲ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದ ಇವರಿಗೆ ಇಲಾಖೆಯ ಆದೇಶದ ಅನ್ವಯ ಉಪ ಪ್ರಾಚಾರ್ಯರಾಗಿ  ಮುಂಬಡ್ತಿ ಪಡೆದು ಹಾವೇರಿ ಜಿಲ್ಲೆಯ ಕರ್ಜಗಿಯ ಕರ್ನಾಟಕ ಪಬ್ಲಿಕ್ ಶಾಲೆಗೆ ವರ್ಗಾವಣೆಗೊಂಡರು.
ಇವರು ವಿದ್ಯಾರ್ಥಿಗಳಿಗಾಗಿ ಹಲವಾರು ಪಠ್ಯ ಚಟುವಟಿಕೆಗಳನ್ನ ಹಾಗೂ  ಕಲಿಕೆಗೆ ಸಹಕಾರಿಯಾಗುವಂತಹ  ಯೋಜನೆಗಳನ್ನ   ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳನ್ನ  ಆಯೋಜಿಸುತ್ತಿದ್ದರು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು  ಇವರು ನೀಡುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರೊಂದಿಗೆ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಸದಾ ಹಸನ್ಮುಖಿಯಾಗಿರುವ ಇವರು ಎದುರಿಗಿರುವ ವ್ಯಕ್ತಿ ಎಂತಹ ನೋವನ್ನು ಹೊಂದಿದ್ದರೂ ಕೂಡ ಅವರೊಂದಿಗೆ ನಗು ಮುಖದಲ್ಲಿ ಮಾತನಾಡುತ್ತಾ ಕ್ಷಣಾರ್ಧದಲ್ಲಿ ಅವರ ನೋವನ್ನು ಮಾಯ ಮಾಡುವ ಶಕ್ತಿಯನ್ನಹೊಂದಿದಂತವರು. ಇವರ ವರ್ಗಾವಣೆಯ ವಿಷಯ ಕೇಳಿ ವಿದ್ಯಾರ್ಥಿಗಳಿಗೆ ತುಂಬಾ ಬೇಜಾರ ಅನಿಸಿದರು ಕೂಡ ಉಪ ಪ್ರಾಚಾರ್ಯರಾಗಿ ಮುಂಬಡ್ತಿ ಪಡೆದಿರುವುದರಿಂದ ಇವರ ಮುಂದಿನ ಕರ್ತವ್ಯಕ್ಕೆ ಹಾಜರಾಗಲು ವಿದ್ಯಾರ್ಥಿಗಳು ಶಿಕ್ಷಕರು ಗ್ರಾಮಸ್ಥರು ಹಳೆ ವಿದ್ಯಾರ್ಥಿಗಳು  ಹೃದಯ ಪರ್ಸಿ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಎಸ್ಎ ಅವಾರಿ.  ಕನ್ನಡ ಶಿಕ್ಷಕರಾದ ಎಂ ಎ ಯರಗುಡಿ.   ಶಿಕ್ಷಕಿ ಪಿ ಜಿ ನಾಯರ. ನಾಜನಿನ್. ಬಸಪ್ಪ ನೆರ್ತಿ.  ಹಳೆ ವಿದ್ಯಾರ್ಥಿಗಳಾದ ಮಹೇಬೂಬ್ ಸಾಬ್  ಮಜೂರ.  ಇನ್ನು ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!