
ಉದಯವಾಹಿನಿ,ಚಿತ್ರದುರ್ಗ: ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆ ದರ್ಜಿ ಕಾಲೋನಿಯ 3ನೇ ತಿರುವಿನಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದ ದೇವಿಯ ಹೊರಬೀಡು ಉತ್ಸವವನ್ನು ಭಾವಸಾರ ಕ್ಷತ್ರಿಯ ಸಮಾಜ ಚಿತ್ರದುರ್ಗ ವತಿಯಿಂದ ಇದೇ ಫೆಬ್ರವರಿ 4ರ ಭಾನುವಾರ ಸಂಜೆ 6-30 ರಿಂದ 8-30ರವರೆಗೆ ದೇವಾಲಯದ ಮುಂಭಾಗ ದೇವಿಯ ಉಯ್ಯಾಲೋತ್ಸವ ಹಾಗೂ ದಿನಾಂಕ 6ರ ಮಂಗಳವಾರ ಸಮಯ ಮದ್ಯಾನ 2 ಗಂಟೆಗೆ ನಗರದ ಹೊರವಲಯದ ಚಂದ್ರವಳ್ಳಿಯಲ್ಲಿ ಏರ್ಪಡಿಸಲಾಗಿದೆ. ಅದರ ಅಂಗವಾಗಿ ಫೆಬ್ರವರಿ 2ರ ಶುಕ್ರವಾರ ಶ್ರೀ ದುರ್ಗಾದೇವಿ ದೇವಿಯನ್ನು ಹೊತ್ತು ನಗರ ಪ್ರದಕ್ಷಿಣೆ ನಡೆಸಲಾಯಿತು. ಸಮಾಜದ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.
