ಉದಯವಾಹಿನಿ,ಶಿಡ್ಲಘಟ್ಟ : ದೇವಾಲಯಗಳ ನಿರ್ಮಾಣ ಹಾಗೂ ಗ್ರಾಮಗಳಲ್ಲಿ ಪಾಳುಬಿದ್ದ ದೇವಾಲಯಗಳನ್ನು ಜೀರ್ಣೋದ್ದಾರ ಮಾಡುವುದು ಒಂದು ಮಹತ್ವದ ಕಾರ್ಯವಾಗಿದೆ ಎಂದು ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದ ನಾಥ ಸ್ವಾಮೀಜಿ ನುಡಿದರು.ತಾಲೂಕಿನ ಜಂಗಮಕೋಟೆ ಹೋಬಳಿಯ  ಹೇಮಾರ್ಲಹಳ್ಳಿಯಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀ ಚನ್ನರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರ, ವಿಮಾನ ಗೋಪುರದ ಮಹಾ ಸಂಪ್ರೋಕ್ಷಣೆ ಮತ್ತು ನೂತನ ಶಿಲಾಬಿಂಬ ಹಾಗೂ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಹೇಮಾರ್ಲಹಳ್ಳಿ ಗ್ರಾಮಸ್ಥರು ಸುಮಾರು ವರ್ಷಗಳಿಂದ ದೇವಾಲಯವನ್ನು ದಾನಿಗಳ ನೆರವಿನಿಂದ ನಿರ್ಮಿಸಿ ಜೀರ್ಣೋದ್ದಾರ ಮಾಡಿದ್ದಾರೆ. ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಗಳು ಹೆಚ್ಚೆಚ್ಚು ನಡೆಯಬೇಕು. ಆಗ ಮನುಷ್ಯರ ಬದುಕಿನಲ್ಲಿ ಸಾಮರಸ್ಯ ಉಂಟಾಗಿ ಶಾಂತಿ ನೆಮ್ಮದಿ ಲಭಿಸಲು ಸಾಧ್ಯವಾಗುತ್ತದೆ ಎಂದು ಆಶೀರ್ವಚನ ನೀಡಿದರು.ಶಾಸಕ ಬಿ.ಎನ್ ರವಿಕುಮಾರ್ ಮಾತನಾಡಿ, ಸುಮಾರು ವರ್ಷಗಳಿಂದ ಈ ಗ್ರಾಮದ ಪ್ರತಿಯೊಬ್ಬರೂ ಶ್ರಮಪಟ್ಟು ಈ ದೇವಾಸ್ಥಾನದ ಜೀರ್ಣೋದ್ಧಾರಕ್ಕೆ ಹಗಲಿರಳು ಶ್ರಮಿಸಿದ್ದಾರೆ. ನಿಮಗೆಲ್ಲರಿಗೂ ಆ ಭಗವಂತ ಒಳ್ಳೆಯದನ್ನೆ ಮಾಡುತ್ತಾನೆ. ಈ ದಿನ ನೀವು ದೇವಾಲಯದ ಜೀರ್ಣೋದ್ಧಾರಕ್ಕೆ ಯಾವುದೇ ಜಾತಿ ಭೇದಭಾವ,ಯಾವುದೇ ಪಕ್ಷವನ್ನದೇ ಸಾಮೂಹಿಕವಾಗಿ ಎಲ್ಲರೂ ಒಗ್ಗಟ್ಟಾಗಿ ಈ ದೇವಸ್ಥಾನ ಅಭಿವೃದ್ಧಿ ಯಾಗಲು ಕಾರಣರಾಗಿದ್ದೀರಿ. ಈ ಕ್ಷೇತ್ರದಲ್ಲಿ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ,ಬಡವರು ನೆಮ್ಮದಿ ಜೀವನ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು.ಶ್ರೀದೇವಿ ಭೂದೇವಿ ಸಮೇತ ಶ್ರೀ ಚನ್ನರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರ, ವಿಮಾನ ಗೋಪುರದ ಮಹಾ ಸಂಪ್ರೋಕ್ಷಣೆ ಮತ್ತು ನೂತನ ಶಿಲಾಬಿಂಬ ಹಾಗೂ ಪ್ರಾಣ ಪ್ರತಿಷ್ಠಾಪನಾ ಪಂಚಮಿಯಂದು ಗಂಗೆ ಪೂಜೆ, ಮೃತ್ಯಂಗ್ರಹಣ, ವಿಶ್ವಕ್ಸೇನ, ಯೋಗಶಾಲಾ ಪ್ರವೇಶ, ಧ್ವಜ ಕುಂಭಾರಾಧನೆ, ವೇದಪಾರಾಯಣ, ವಿಷ್ಣು ಸಹಸ್ರನಾಮ, ಪಾರಾಯಣ ,ವಿವಿಧ ದೇವತಾ ಹೋಮಗಳು, ಪೂರ್ಣಾವತಿ ವಿವಿಧ ಹೋಮಗಳು ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎನ್ .ಸ್ವಾಮಿ, ಭಕ್ತರಹಳ್ಳಿ ಭೈರೇಗೌಡ, ವಕ್ಕಲೇರಿ ರಾಮು,ನಾಗಮಂಗಲ ಶ್ರೀನಿವಾಸ್, ತಾದೂರು ರಘು,ಬಿಕೆ.ಶ್ರೀನಿವಾಸ್, ಬಿ.ಎನ್ ಸಚಿನ್,ಗ್ರಾಅಧ್ಯಕ್ಷ ರಾಜಣ್ಣ,ಬಿ ಜಿ ಎಸ್ ಶಾಲೆಯ ಕೆ.ಮಹದೇವ್,ಪಿಳ್ಳನಾರಾಯಣಸ್ವಾಮಿ,ಆಂಜಿನಪ್ಪ,ತಾದೂರು ಮಂಜುನಾಥ್,ಅಂಬರೀಶ್,ಗ್ರಾಮ ಪಂಚಾಯತಿ ಸದಸ್ಯರಾದ  ಹೆಚ್ ಪಿ ನಾಗರಾಜ್,ಲೋಕೇಶ್,ನಾಗಮಣಿ,ಮಾಜಿ ಗ್ರಾಪಂ ಮಾಜಿ ಸದಸ್ಯರಾದ ಹೆಚ್ ಪಿ ಆಂಜಿನಪ್ಪ, ಮುಖಂಡರು ಹನುಮಂತರಾಯಪ್ಪ,ರಾಜಣ್ಣ,ಯುವ ಮುಖಂಡರಾದ ಕೇಶವಮೂರ್ತಿ ಎಂ, ಶಾಂತಕುಮಾರ್, ರಾಘವೇಂದ್ರ, ವಿಜಯ್,ಮನೋಜ್, ಹರ್ಷವರ್ದನ್, ಅನೀಲ್ ,ಕುಲಬಾಂಧವರು ಗ್ರಾಮಸ್ಥರು ಹಾಗೂ ದಾನಿಗಳು ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!