ಉದಯವಾಹಿನಿ, ಆನೇಕಲ್ : ಸಂವಿದಾನದಿನಾಚಣೆಯ ಪ್ರಯುಕ್ತವಾಗಿ ಸಂವಿಧಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥವನ್ನು ಹಮ್ಮಿಕೊಂಡಿದ್ದು ಇಂದ ಕೋನಪ್ಪನ ಅಗ್ರಹಾರ ಪುರಸಭೆ ವ್ಯಾಪ್ತಿಯ ಗೋವಿಂದಶೆಟ್ಟಿ ಪಾಳ್ಯ ಮತ್ತು ದೊಡ್ಡನಾಗಮಂಗಲ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥ ರಥವು ಆಗಮಿಸುತ್ತಿದ್ದಂತೆ ಕೋನಪ್ಪನ ಅಗ್ರಹಾರ ಪುರಸಭೆ ವ್ಯಾಪ್ತಿಯ ಜನಪ್ರತಿನಿಧಿಗಳು, ಅಂಬೇಡ್ಕರ್ ಅನುಯಾಯಿಗಳು
ಗ್ರಾಮಸ್ಥರು ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ ಜೈಕಾರ ಹಾಕಿದರು.
ಇನ್ನು ಇದೇ ಸಂಧರ್ಭದಲ್ಲಿ ಹಲವು ಕಲಾ ತಂಡಗಳೊಂದಿಗೆ ಸಂವಿಧಾನ ಜಾಗೃತಿ ಜಾಥ ರಥವು ಗೋವಿಂದಶೆಟ್ಟಿ ಪಾಳ್ಯ ಮತ್ತು ದೊಡ್ಡನಾಗಮಂಗಲ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಇ.ಓ. ಡಾ. ಬಿಂದು, ಸಮಾಜ ಕಲ್ಯಾಣ ಇಲಾಖೆಯ ಶ್ರೀಮತಿ ಶಾಮಲಾ, ಕೋನಪ್ಪನ ಅಗ್ರಹಾರ ಮುಖ್ಯಾದಿಕಾರಿ ಮುನಿರಾಜು
ಸ್ಥಳೀಯ ಮುಖಂಡರಾದ ಗೊವಿಂದಶೆಟ್ಟಿ ಪಾಳ್ಯ ಮೂರ್ತಿ, ಮೋಹನ್, ಸತೀಶ್, ಕುಮಾರ್, ದೊಡ್ಡನಾಗಮಂಗಲ ವಸಂತ್, ಸದಾಶಿವು, ರೂಪೇಶ್, ಕಿಶೋರ್ ಮತ್ತು ಸ್ಥಳೀಯ ಮುಖಂಡರುಗಳು ಬಾಗವಹಿಸಿದ್ದರು.
