ಉದಯವಾಹಿನಿ, ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಹೃದಯ ಸ್ಥಾನವೆನಿಸಿರುವ ಮುನಿಸಿಪಲ್ ಬಸ್ ನಿಲ್ದಾಣಕ್ಕೆ ಸಮೀಪ ಚಿಕ್ಕಬಳ್ಳಾಪುರ ತಾಲೂಕು ಪಂಚಾಯತ್ ಕಾರ್ಯಾಲಯದ ಹಿಂಭಾಗ ಹಾಗೂ ಜಿಲ್ಲಾ ಕಾರ್ಯನಿರ್ತಾ ಪತ್ರಕರ್ತರ ಸಂಘದ ಅತ್ಯಂತ ಸಮೀಪ ಸರ್ಕಾರಿ ವ್ಯಾಪ್ತಿಯಲ್ಲಿರುವ ಸ್ಥಳ ಈಗ ಕುಡುಕರ ಅಡ್ಡಿಯಾಗಿ ಪರಿಣಮಿಸಿರುವುದು ಸಾರ್ವಜನಿಕ ವಲಯದಲ್ಲಿ ತೀರ ಅಸಹಣೆ ಮೂಡಿಸಿರುವ ವಿಷಯವಾಗಿದೆ.
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರ ಭವನ ವಾರ್ತಾ ಇಲಾಖೆ ಕಚೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಅದರ ಪಕ್ಕದ ಎರಡು ತಾತ್ಕಾಲಿಕ ಕಟ್ಟಡಗಳು ಈಗ ಅಲ್ಲಿ ಏನು ಕಾರ್ಯ ಕಲಾಪಗಳಿಲ್ಲದೆ ಹಾಳು ಕೊಂಪೆ ಆಗಿದೆ.
ಸರ್ಕಾರದ ಅನುದಾನದಿಂದ ಬಳಕೆ ಮಾಡಿಕೊಂಡ ಈ ಕಟ್ಟಡಗಳು ಈಗ ದುರಸ್ತಿಗೆ ಒಳಗಾಗಿದೆ ಇಲ್ಲಿ ರಾತ್ರಿಯ ಹೊತ್ತು ಕುಡುಕರು ತಮ್ಮ ಕುಡಿತಕ್ಕೆ ಈ ಜಾಗ ಬೆಳೆಸಿಕೊಳ್ಳುತ್ತಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರಗಳನ್ನು ಇಲ್ಲಿ ನೀಡಿದ್ದೇನೆ. ವಿಡಿಯೋ ಸಹ ಇದೆ. ಜಿಲ್ಲಾಧಿಕಾರಿಗಳಾಗಲಿ ಸಂಬಂಧಪಟ್ಟ ಇಲಾಖೆಗಳವರಾಗಲಿ ಇತ್ತ ಗಮನ ಹರಿಸಿ ಈ ಕಟ್ಟಡ ಸರ್ಕಾರಿ ಇಲಾಖೆಯ ಯಾವುದಾದರೂ ಸರ್ಕಾರಿ ಕಚೇರಿಗೆ ಬಳಸಿಕೊಂಡರೆ ಆಗುತ್ತಿರುವ ನಷ್ಟವನ್ನು ತುಂಬಿಕೊಳ್ಳಬಹುದು.
ಬಾಡಿಗೆ ನೀಡಿ ಸರ್ಕಾರಿ ಕಚೇರಿ ನಡೆಸಿಕೊಳ್ಳುತ್ತಿರುವ ಇಲಾಖೆಗಳಲ್ಲಿ ಕನಿಷ್ಠಪಕ್ಷ ಎರಡು ಇಲಾಖೆಗೆ ಈ ಸ್ಥಳ ನಿಗದಿ ಪಡಿಸಬಹುದು.
