ಉದಯವಾಹಿನಿ, ರಾಯಚೂರು: ಪ.ಜಾತಿ ಮತ್ತು ಪ.ಪಂಗಡ ಅಲೆಮಾರಿ ಸಮುದಾಯಗಳ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ರಾಜ್ಯದಲ್ಲಿ ಅಲೆಮಾರಿಗಳು ಅತ್ಯಂತ ಹೀನಯವಾಗಿ ಬಡತನ ಸ್ಥಿತಿಯನ್ನು ಮತ್ತು ಅನಕ್ಷರತೆಯನ್ನು ಎದುರಿಸುತ್ತಿರುವ ಕಟ್ಟ ಕಡೆಯ ಸಮಾಜಗಳಾಗಿವೆ ಇದರಲ್ಲಿ ಬಹುತೇಕರು ನಿರ್ಗತಿಕರು ನೆಲೆ ಇಲ್ಲದವರು ಆಗಿದ್ದಾರೆ. ಕೆಳಗೆ ನೀಡಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅಲೆಮಾರಿಗಳ ಬದುಕು ಹಸನಾಗಲು ಇವರಿಗೆ ಜೀವನ ರೂಪಿಸಿಕೊಳ್ಳಲು ಸರ್ಕಾರ ಅಲೆಮಾರಿಗಳನ್ನು ಮುಂಚೂಣಿಗೆ ತರಲು ಸಹಕಾರ ನೀಡಬೇಕು.
ಅರ್ಜಿ ಸಲ್ಲಿಸಿದ ಎಲ್ಲಾ ಅಲೆಮಾರಿಗಳಿಗೆ ನೇರಸಾಲ, ಉದ್ರುಮಿಶೀಲತಾ, ಮತ್ತು ಇತರೆ ಸಾಲ ಸೌಲಭ್ಯಗಳು ಸಿಗಬೇಕು.ಎಲ್ಲಾ ಅಲೆಮಾರಿಗಳು ಮನೆಗಳನ್ನು ನಿರ್ಮಾಣ ಮಾಡಲಿಕ್ಕೆ, ೫-೬ ಲಕ್ಷ ರೂಪಾಯಿಗಳು ನಿಗದಿಪಡಿಸಬೇಕು. ಎಲ್ಲಾ. ಅಲೆಮಾರಿಗಳಿಗೆ ೩ಸತಿ ಇಲ್ಲದೆ ಇರುವವರಿಗೆ ವಸತಿಯನ್ನು ಕಲ್ಪಿಸಬೇಕು. ಪ್ರಮುಖವಾಗಿ ಭೂ ಒಡೆತನ ಯೋಜನೆ ಅಡಿ ಎಲ್ಲಾ, ಅಲೆಮಾರಿಗಳಿಗೆ ಜಮೀನು ದೊರಕಿ ಬದುಕು ಸಾಗಿಸಲು ರೂಪಿಸಬೇಕು.
ಅಲೆಮಾರಿ ಶಾಶ್ವತ ಆಯೋಗವನ್ನು ಬಜೆಟ್ ನಲಿ ಘೋಷಿಸಬೇಕು, ಆಯೋಗ ರಚನೆಯಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಈ ಬಜೆಟ್‌ನಲ್ಲಿ ೧೦೦೦ ಕೋಟಿಯನ್ನು ಬಜೆಟ್‌ನಲ್ಲಿ ಘೋಷಿಸಬೇಕು. ರಂಗಮುನಿ ತಿಮ್ಮಪ್ಪ ಸ್ವಾಮಿ, ಹುಸೇನಪ್ಪ, ಮಲ್ಲಯ್ಯ, ವಿನೋದ ಸೇರಿದಂತೆ ಉಪಸ್ಥಿತರಿದ್ದರು.
