ಉದಯವಾಹಿನಿ, ರಾಯಚೂರು: ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ ದೊರೆತ ಪುರಾತನ ವಿಷ್ಣು ಮೂರ್ತಿಗಳು ಹಾಗೂ ಶಿವಲಿಂಗ ವಿಗ್ರಹಗಳು ಪುರಾತತ್ವ ಇಲಾಖೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೀಗಾಗಿ ರಾಜ್ಯ ಹಾಗೂ ತೆಲಂಗಾಣದ ಅರ್ಚಕರು ಹಾಗೂ ಭಕ್ತರು ವಿಗ್ರಹಗಳು ನಮಗೆ ಸೇರಿದ್ದು ಅಂತ ಪೈಪೋಟಿ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ಬಾಲರಾಮನ ವಿನ್ಯಾಸ ಹೋಲುವ ದಶವತಾರಿ ವಿಷ್ಣುರೂಪದ ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನ ಮಾತ್ರ ದೇವಸುಗೂರಿನ ರಾಮಲಿಂಗೇಶ್ವರ ದೇವಾಲಯದಲ್ಲಿ ಇಡಲಾಗಿದೆ. ಉಳಿದ ಎರಡು ವಿಗ್ರಹಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕೃಷ್ಣಾನದಿಯಲ್ಲೆ ಬಿಡಲಾಗಿದೆ. ನದಿಯಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು, ಜನ ಕಾಲುದಾರಿಯಲ್ಲಿ ಬಂದು ವಿಗ್ರಹಗಳ ದರ್ಶನ ಪಡೆಯುತ್ತಿದ್ದಾರೆ. ದಶವತಾರಿ ವಿಷ್ಣು ವಿಗ್ರಹಕ್ಕೆ ಮಾತ್ರ ಪೈಪೋಟಿಯಿದ್ದು ಶಿವಲಿಂಗ ಹಾಗೂ ಇನ್ನೊಂದು ವಿಷ್ಣು ವಿಗ್ರಹ ಪತ್ತೆಯಾದ ಜಾಗದಲ್ಲೇ ಉಳಿದಿವೆ.
