ಉದಯವಾಹಿನಿ, ಭಾಲ್ಕಿ: ಫೆ.9:ತಾಲೂಕಿನ ಧನ್ನೂರ(ಹೆಚ್) ಗ್ರಾಮದಲ್ಲಿ ವಿಷ್ಣುಕಾಂತ ಜಿ.ಜೆ ರಚಿಸಿ ನಿರ್ಮಿಸುತ್ತಿರುವ ಜಗನ್ಮಾತೆ ಅಕ್ಕಮಹಾದೇವಿ ಚಲನ ಚಿತ್ರಕ್ಕೆ ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ರಾಂತಿಯೋಗಿ ಬಸವಣ್ಣನವರು ನಡೆದಾಡಿದ ಭೂಮಿ ಧನ್ನೂರಿನಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಉತ್ತಮ ಪಾತ್ರಧಾರಿಗಳು, ಮತ್ತು ಮನಮುಟ್ಟುವ ಶರಣರ ಕಥೆಯಿರುವ ಚಲನ ಚಿತ್ರ ನೋಡುವುದರಿಂದ ಮನ: ಪರಿವರ್ತನೆಯಾಗುತ್ತದೆ. ರವಿ ಸುವರ್ಣ ರವರ ಛಾಯಾಗ್ರಹಣ, ಆರ್ ಪಳನಿಯವರ ಸಂಗೀತ ಉತ್ತಮವಾಗಿ ಮೂಡಿ ಬರುತ್ತದೆ. ಧನ್ನೂರ ಗ್ರಾಮದವರೇ ಆದ ನಟ, ನಿರ್ದೇಶಕ, ನಿರ್ಮಾಪಕ ಬಿ.ಜೆ.ವಿಷ್ಣುಕಾಂತ ರವರು ಈ ಹಿಂದೆ ಡಾ| ಬಿ.ಆರ್.ಅಂಬೇಡ್ಕರ್, ಕಲ್ಯಾಣ ಕುವರ, ಸೇರಿದಂತೆ ಹಲವಾರು ಚಲನ ಚಿತ್ರಗಳನ್ನು ತೆಗೆದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಶಿವಶಂಕರ ಟೋಕರೆ, ಡಾ| ಓಂಕಾರ ಸ್ವಾಮಿ ಚಲನಚಿತ್ರದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಪರಮೇಶ್ವರ ಅಣ್ಣಾರಾವ ಪಾಟೀಲ, ಶ್ರೀಕಾಂತ ದಾನಿ, ಬಸವರಾಜ ಕಾಶೆಪ್ಪ ಹಾಳಿ, ಬಾಬುರಾವ ಪೊಲೀಸ ಪಾಟೀಲ, ಕಾಶಿನಾಥ ಖಂಡ್ರೆ, ಚಂದ್ರಕಲಾ ಅಶೋಕ, ಗುಂಡೇರಾವ ಪಾಟೀಲ, ವೈಜಿನಾಥ ಸದಾನಂದಪ್ಪ ಮೂಲಗೆ, ಗಣೇಶ.ಸಿ.ಎ ಸೇರಿದಂತೆ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!