ಉದಯವಾಹಿನಿ, ಹೊಸಪೇಟೆ : ಅಮರಾವತಿಯ ಚಿಂತಾಮಣಿ ಮಠದಲ್ಲಿ ಚಿಂತಾಮಣ ಮಠದ 29ನೇ ಗುರುಗಳಾದ ಶ್ರೀ ಶ್ರೀನಿವಾಸ ಸದಾನಂದ ಚಿಂತಾಮಣಿ ಮಹಾಸ್ವಾಮಿಗಳ 30ನೇ ಆರಾಧನೋತ್ಸವ ಗುರುವಾರ ಜರುಗಿತು.
ಆನೆಗುಂದಿ ಮಹಾಸಂಸ್ಥಾನದ ಚಿಂತಾಮಣಿ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಶ್ರೀಗಳ ನೇತೃತ್ವದಲ್ಲಿ ಅತ್ಯಂತ ವಿದ್ವಾತ್ ಪೂರ್ಣವಾಗಿ ಋತ್ವಿಕರಾದ ಹಂಪಿಯ ಮೋಹನ್‍ಚಿಕ್ಕಭಟ್ ಜೋಶಿ ಮುಂದಾಳತ್ವದಲ್ಲಿ ಜರುಗಿತು. ಭಕ್ತರ ಅತ್ಯಂತ ಪ್ರೀತಿಯ ಗುರುಗಳಾದ ಇವರನ್ನು ಸೀನಪ್ಪಸ್ವಾಮಿಗಳು ಎಂದೆ ಕರೆಯುವ ಪ್ರತೀತಿ ಇದ್ದು ಗುರುಗಳ ತ್ಯಾಗ, ವೈರಾಗ್ಯ, ವಿದ್ವತ್ತಿನ ಬಗ್ಗೆ ಶ್ರೀ ಶಿವಾನಂದಭಾರತೀ ಶ್ರೀಗಳು ತಮ್ಮ ಆರ್ಶಿವಚನದುದ್ದಕ್ಕೂ ಹೇಳಿದರು.
ಶ್ರೀಮಠದ ಪರಂಪರೆಯಂತೆ ಧಾರ್ಮಿಕ ಕಾರ್ಯಕ್ರಮಗಳು, ಭಜನೆ ಸೇರಿದಂತೆ ತೀರ್ಥ ಪ್ರಸಾದ ವೈವಸ್ಥೆ ಆಯೋಜಿಸಲಾಗಿತು.
