ಉದಯವಾಹಿನಿ, ರಾಯಚೂರು: ರಾಯಚೂರಿನ ಲಿಂಗಸಗೂರು ತಾಲೂಕಿನ ನೀರಲಕೇರಿ ಸರ್ಕಾರಿ ಶಾಲೆಯೊಂದರಲ್ಲೇ 150 ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನ ಬಾವು ಕಾಯಿಲೆ ಕಾಣಿಸಿಕೊಂಡಿದೆ. ತಲೆನೋವು, ಸ್ನಾಯು ಸೆಳೆತದಿಂದ ಮಕ್ಕಳು ನರಳಾಡುತ್ತಿದ್ದಾರೆ.
ಲಿಂಗಸೂಗೂರು ತಾ. ಆನೆಹೊಸರು, ಲಿಂಗಸೂಗೂರು ಆಸ್ಪತ್ರೆಗೆ ಮಕ್ಕಳನ್ನು ದಾಖಲು ಮಾಡಲಾಗಿದೆ. ಈ ಹಿನ್ನೆಲೆ ನಿತ್ಯ ಶಾಲೆಗೆ ಗೈರು ಹಾಜರಿ ಆಗುತ್ತಿರುವ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದುಳಿಯುತ್ತಿದ್ದಾರೆ. ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗಿದೆ.
ನೀರಲಕೇರಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ ಆರೋಗ್ಯ ಇಲಾಖೆ ಪರೀಕ್ಷೆ ನಡೆಸುತ್ತಿದೆ. ಲಿಂಗಸೂಗೂರು ತಾಲೂಕಿನ ಮಕ್ಕಳಲ್ಲಿ ಮಂಗನ ಬಾವು ಪತ್ತೆಯಾಗಿದೆ. ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಈ ಕಾಯಿಲೆ ಬರುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡಿ,ಇಡೀ ಶಾಲೆಯನ್ನೆ ಆವರಿಸಿದೆ ಈ ಕಾಯಿಲೆ ಎಂದು ರಾಯಚೂರು ಡಿಎಚ್‍ಒ ಡಾ.ಸುರೇಂದ್ರಬಾಬು ತಿಳಿಸಿದ್ದಾರೆ.

ಮಂಗನ ಬಾವು ರೋಗವೂ ವಾರದಲ್ಲಿ ಸಹಜವಾಗಿ ಕಡಿಮೆ ಆಗುತ್ತದೆ. ಇಡೀ ಜಿಲ್ಲೆಯಾದ್ಯಂತ ಮಕ್ಕಳಿಗೆ ಎಂಎಂಆರ್ ವ್ಯಾಕ್ಸಿನೇಷನ್ ಆಗಿದೆ. ಮಂಗನ ಬಾವು ಬಂದ ಮಕ್ಕಳು ಎರಡು- ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕು. ಮಕ್ಕಳಲ್ಲಿ ಜ್ವರ ಬಂದಾಗ ಫ್ಯಾರಾಸೀಟಮ್ ಮಾತ್ರೆ ನೀಡಿದರೆ ಸಾಕು. ಮಂಗನ ಬಾವು ಅಪಾಯಕಾರಿ ಕಾಯಿಲೆ ಅಲ್ಲ ಎಂದು ಪೋಷಕರಿಗೆ ಧೈರ್ಯ ತುಂಬಿದ್ದರೆ.

Leave a Reply

Your email address will not be published. Required fields are marked *

error: Content is protected !!