ಉದಯವಾಹಿನಿ, ಬೆಂಗಳೂರು:  ಉದಯವಾಹಿನಿ ಪತ್ರಿಕೆ ರಾಜ್ಯಾದ್ಯಂತ ಪ್ರಾದೇಶಿಕ ಪತ್ರಿಕೆಯಾಗಿದ್ದು, ಪತ್ರಿಕೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಪತ್ರಕರ್ತ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ನೊಂದವರ ಮತ್ತು ಸಮಾಜದ ಕಟ್ಟಕಡೆಯ ಕೆಳ ವರ್ಗದ  ಜನಪರ ಧ್ವನಿಯಾಗಿ ಬಡವರ ಸಮಸ್ಯೆಗಳನ್ನುಸರ್ಕಾರಕ್ಕೆ ಮುಟ್ಟಿಸುವಲ್ಲಿ ಮತ್ತು ಪತ್ರಿಕೆಯಲ್ಲಿ ವರದಿ ಪ್ರಸಾರವಾದ ಕೆಲವೇ ದಿನಗಳಲ್ಲಿ ವರದಿಗಳ ಫಲಶ್ರುತಿಯಿಂದ ಬಡವರು ಮತ್ತು ಅನೇಕ ಸಂಘ ಸಂಸ್ಥೆಗಳ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬರುತ್ತಾ ರಾಜ್ಯದ ದೂರದ ಜಿಲ್ಲೆಗಳ ಕಟ್ಟಕಡೆಯ ತಾಲ್ಲೂಕು ಗ್ರಾಮಗಳಿಗೂ ಸಹ ಹೆಸರು ವಾಸಿಯಾಗುವಂತೆ ಕೆಲವೇ ದಿನಗಳಲ್ಲಿ ತಮ್ಮ ಪರಿಶ್ರಮದ ಮೂಲಕ ಮಾಧ್ಯಮ ಲೋಕವನ್ನು ಪರಿಚಯಿಸಿ ಕೆಲವು ಯುವಕರಿಗೆ ಸ್ಪೂರ್ತಿದಾಯದಾಯಕವಾಗಿ ಸಾಮಾಜಿಕ ಕಳಕಳಿಯ ಕೆಲಸ ತೋರಿಸುತ್ತಾ ತಮ್ಮದೇ ಆದ ಸಾಮಾಜಿಕ ಕಳಕಳಿಗಳಲ್ಲಿ ಜನರಿಗೆ ಸ್ಪಂದಿಸುತ್ತ ಪತ್ರಿಕೆಯ ಮುಖಾಂತರವೂ ಸಾರ್ವಜನಿಕ ಸಮಸ್ಯೆಗಳಲ್ಲಿ ಸಹ ರಾಜ್ಯ ಸರ್ಕಾರ ಕಣ್ತೆರೆಸಬಹುದು ಎಂದು ತೋರಿಸುತ್ತಾ ಬಂದಿರುವ ಟಿ. ಹೊಂಬೆಗೌಡರಿಗೆ ೨೦೨೩ ೨೪ನೇ ಸಾಲಿನ ನಾಡೋಜ ಪಾಟೀಲ್ ಪುಟ್ಟಪ್ಪ ಪ್ರಶಸ್ತಿ ನೀಡಿ  ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ  ರಾಜ್ಯ ಅರಣ್ಯ ಪರಿಸರ ಸಂರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ಪತ್ರಕರ್ತರ ಸಂಘದ ಸಂಘ ನೀಡಿರುವ ನಾಡೋಜ ಪಾಟೀಲ್ ಪುಟ್ಟಪ್ಪ ಪ್ರಶಸ್ತಿಗೆ ಭಾಜನರಾಗಿರುವ ಟಿ.ಹೊಂಬೆಗೌಡರಿಗೆ ಅಭಿನಂದನೆಗಳನ್ನು ಸಹ ಸಲ್ಲಿಸಲಾಗುವುದು ಎಂದು ಕರ್ನಾಟಕ  ರಾಜ್ಯ ಅರಣ್ಯ ಪರಿಸರ ಸಂರಕ್ಷಣೆ ವೇದಿಕೆ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್ ತಿಳಿಸಿದ್ದಾರೆ. ಅಲ್ಲದೆ ಬರುವ ದಿನಗಳಲ್ಲಿ ಹೊoಬೆಗೌಡರ ಸಾಮಾಜಿಕ ಸೇವೆ ಹೀಗೆ ಮುಂದುವರೆಯಲಿ ಮತ್ತು ಬರುವ ದಿನಗಳಲ್ಲಿ ಕರ್ನಾಟಕದ ರಾಜ್ಯ ಸರ್ಕಾರ  ಸಹ ಇವರ ಮಾಧ್ಯಮ ಕ್ಷೇತ್ರದ ಸಮಾಜ ಸೇವೆ ಗುರುತಿಸುವಂಥ ಆಗಲಿ ಎಂದು ರಾಜ್ಯದ ಎಲ್ಲಾ ಜಿಲ್ಲೆಯ ಉದಯವಾಹಿನಿ ಪತ್ರಿಕೆ ವರದಿಗಾರರು ಮತ್ತು ಕರ್ನಾಟಕ  ಅರಣ್ಯ ಪರಿಸರ ಸಂರಕ್ಷಣಾ ವೇದಿಕೆಯ ಮುಖಂಡರುಗಳು ಹಾರೈಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!