ಉದಯವಾಹಿನಿ, ಬೆಂಗಳೂರು: ಜನನಿಬಿಡ ಬಸ್ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿದ್ದ ಬಸ್‌ಗಳಲ್ಲಿ ಮೊಬೈಲ್ ಕಳವು ಮಾಡುತ್ತಿದ್ದ ವರು ಕುಖ್ಯಾತ ಮಹಿಳೆಯರ ಗ್ಯಾಂಗನ್ನು ಬಂಧಿಸಿರುವ ಮಹದೇವಪುರ ಪೊಲೀಸರು ೧೨೦ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಗ್ಯಾಂಗ್‌ನಲ್ಲಿದ್ದ ರಾಧ, ರಾಶಿ, ಪೋಂಗುಲ ನಂದಿನಿ, ಶಂಕರಮ್ಮ, ಶಾಂತಮ್ಮರನ್ನು ಬಂಧಿಸಿ ವಿವಿಧ ಕಂಪನಿಯ ೩೦ ಲಕ್ಷ ಮೌಲ್ಯದ ೧೨೦ ಮೊಬೈಲ್‌ಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.
ಬಂಧಿತ ಮಹಿಳೆಯರಲ್ಲಿ ಮೂವರು ಆಂಧ್ರಪ್ರದೇಶ ಮೂಲದವರಾಗಿದ್ದು, ಇನ್ನಿಬ್ಬರ ಜತೆ ಸೇರಿ ಗ್ಯಾಂಗ್ ಕಟ್ಟಿಕೊಂಡು ನಗರದ ಜನನಿಬಿಡಬಸ್ ನಿಲ್ದಾಣಗಳು, ಜನಜಂಗುಳಿ ಇರುವ ಪ್ರದೇಶಗಳು,ಪ್ರಯಾಣಿಕರಿಂದ ತುಂಬಿದ ಬಸ್‌ಗಳಲ್ಲಿ ನೂಕುನುಗ್ಗಲು ಉಂಟು ಮಾಡಿ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದರು.ಕಳವು ಮಾಡಿದ ಮೊಬೈಲ್‌ಗಳನ್ನು ಮನೆಯಲ್ಲಿ ಶೇಖರಿಸಿ ನಂತರ ಆಂಧ್ರಪ್ರದೇಶ ಮೂಲದ ವಕ್ತಯೊಬ್ಬನಿಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದರು.
ಮಹದೇವಪುರದಲ್ಲಿ ನಡೆದಿದ್ದ ಮೊಬೈಲ್ ಕಳವು ಕೃತ್ಯವನ್ನು ಬೆನ್ನಟ್ಟಿ ಡಿಸಿಪಿ ಶಿವಕುಮಾರ್ ನೇತೃತ್ವದ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡು ಗ್ಯಾಂಗ್‌ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!