ಉದಯವಾಹಿನಿ,ಆನೇಕಲ್: ಡೆಲ್ಲಿಯ ಹಿರಿಯ ಪತ್ರಕರ್ತರಾದ ಮುಖೇಶ್ ಸರ್ಕಾರ್ ಎಂಬುವರು ಸಂವಿದಾನದ ಮಹತ್ವ ಮತ್ತು ಅಂಬೇಡ್ಕರ್ ಆಶಯಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಕನ್ಯಾ ಕುಮಾರಿಯಿಂದ ಡೆಲ್ಲಿ ವರೆಗೆ ರಥ ಯಾತ್ರೆ ಹಮ್ಮಿಕೊಂಡಿದ್ದು ಇಂದು ಆನೇಕಲ್ ತಾಲ್ಲೂಕಿನ ಎಸ್.ತಿಮ್ಮಸಂದ್ರ ಗ್ರಾಮಕ್ಕೆ ರಥ ಯಾತ್ರೆಯು ಬರುತ್ತಿದ್ದಂತೆ ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ರಾಜ್ಯಾಧ್ಯಕ್ಷ ಮರಸೂರು ಡಾ|| ಕೃಷ್ಣಪ್ಪರವರ ನೇತೃಥ್ವದಲ್ಲಿ ರಥಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭವ್ಯ ಸ್ವಾಗತ ಕೋರಲಾಯಿತು ಹಾಗೂ ಅಂಬೇಡ್ಕರ್ ಜೈಕಾರ ಹಾಕಲಾಯಿತು. ಇದೇ ಸಂಧರ್ಭದಲ್ಲಿ ಡೆಲ್ಲಿಯ ಹಿರಿಯ ಪತ್ರಕರ್ತರಾದ ಮುಖೇಶ್ ಸರ್ಕಾರ್ ರವರನ್ನು ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಮಹಿಳಾ ಅಧ್ಯಕ್ಷೆ ಬೊಮ್ಮಸಂದ್ರ ರೇಣುಕಾ, ಉಪಾಧ್ಯಕ್ಷೆ ಮುನಿರತ್ನಮ್ಮ, ಕನ್ನಡಾಂಬೆ ರಕ್ಷಣ ವೇದಿಕೆ ಸಿಂಹ ಘರ್ಜನೆಯ ಅಧ್ಯಕ್ಷೆ ಕೀರ್ತನಾ ಮಂಜುನಾಥ್, ಹೋರಾಟಗಾರರಾದ ಮಂಜುನಾಥ್, ಚೂಡಹಳ್ಳಿ ಕಾಳಯ್ಯ, ಅರೇಹಳ್ಳಿ ಮಂಜುನಾಥ್, ಜಾಲಿ ವೆಂಕಟೇಶ್, ಸರೋಜಮ್ಮ, ಮುನಿರತ್ನಮ್ಮ, ಲಲಿತಾ ಮತ್ತಿತರು ಹಾಜರಿದ್ದರು.
