ಉದುಯವಾಹಿನಿ,ಗಂಗಾವತಿ: ತಾಲೂಕಿನ ಪ್ರಗತಿ ನಗರದ ಭಾರತೀಯ ಬಾಲ ವಿದ್ಯಾಲಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಹಾಗೂ ಆಹಾರ ಪದಾರ್ಥಗಳ ಮಾರಾಟ ಮೇಳವನ್ನು ಹಿರಿಯ ಕೃಷಿ ವಿಜ್ಞಾನಿ ಕವಿತಾ ಹಾಗೂ ಕಾಡ ಮಾಜಿ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಕವಿತಾ ಅವರು ಮಾತನಾಡಿ ಭಾರತೀಯ ಬಾಲ ವಿದ್ಯಾಲಯ ಸಂಸ್ಥೆಯು ಮಕ್ಕಳಲ್ಲಿರುವ ಕೌಶಲ್ಯವನ್ನು ಮತ್ತು ಮಕ್ಕಳಿಗೆ ವ್ಯವಹಾರದ ಜ್ಞಾನವನ್ನು ಹೊರ ತರುವ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಮಾರಾಟ ಹಾಗೂ ಆಹಾರಮೇಳವನ್ನು ಹಮ್ಮಿಕೊಂಡಿದ್ದಾರೆ ಇದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ ವಿದ್ಯಾರ್ಥಿಗಳು ಅಭ್ಯಾಸದ ಜೊತೆ ವ್ಯಾಪಾರ ಮಾಡುವ ಕಲೆ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಮಾಜಿ ಕಾಡಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ತಾವೇ ಸ್ವತಹ ತಯಾರಿಸಿದ ಕರಕುಶಲ ವಸ್ತುಗಳು ಹಾಗೂ ವಿವಿಧ ವೀರಭಗೆಯ ಆಹಾರಗಳು ಮತ್ತು ವಿಜ್ಞಾನಿ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ನೋಡಿದರೆ ಖುಷಿಯಾಗುತ್ತೆ ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಭಾರತೀಯ ಬಾಲ ವಿದ್ಯಾಲಯ ಸಂಸ್ಥೆಯು ಯಶಸ್ವಿಯಾಗಿದೆ ಎಂದರು
ಈ ವೇಳೆ ರೇವಣಸಿದ್ದಯ್ಯ ಸ್ವಾಮಿ, ಮಲ್ಲನಗೌಡ ಶಾಲೆಯ ಮುಖ್ಯೋಪಾಧ್ಯಾಯರಾದ ಹೇಮಂತ್ ರಾಜ್ ಕಲ್ಮಂಗಿ ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.
