ಉದುಯವಾಹಿನಿ, ಹನೂರು: ಜಿಲ್ಲಾ ಕೇಂದ್ರದ ಕೇಂದ್ರಸ್ಥಾನವಾದ ಚಾಮರಾಜನಗರದ ನಗರ ಸಭೆಗೆ ಖಾಯಂ ಪೌರಾಯುಕ್ತರನ್ನು ನೇಮಿಸದ ಕಾರಣ ನಗರಸಭೆಯಲ್ಲಿನ ನಿಯಮಗಳ ಅರಿವಿರದಿದ್ದರೂ ಪ್ರಭಾರರದೇ ಕಾರುಬಾರು ಜೋರಾಗಿದೆ.
ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯ್ತಿ, ಪುರಸಭೆ ಹಾಗೂ ನಗರಸಭೆಗೆ ಕೆ.ಎಂ.ಎಸ್ ದರ್ಜೆಯ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕೆಂದು ರಾಜ್ಯ ಸರ್ಕಾರದ ಸ್ಪಷ್ಟ ನಿರ್ದೇಶನವಿದೆ. ಅದರಂತೆ ಜಿಲ್ಲೆಯ ಕೊಳ್ಳೇಗಾಲ ನಗರಸಭೆಗೆ ಸ್ಥಳೀಯ ಶಾಸಕ ಎ.ಆರ್.ಕೃಷ್ಣಮೂರ್ತಿಯವರ ಹಿತಾಸಕ್ತಿಯಿಂದಾಗಿ ಕೆ.ಎಂ.ಎಸ್. ದರ್ಜೆಯ ರಮೇಶ್‍ರವರು ಖಾಯಂ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
ಆದರೆ ಚಾಮರಾಜನಗರದ ನಗರಸಭೆಗೆ ಮಾತ್ರ ಕೆ.ಎಂ.ಎಸ್ ದರ್ಜೆಯ ಖಾಯಂ ಪೌರಾಯುಕ್ತರನ್ನು ನೇಮಿಸುವಲ್ಲಿ ಸ್ಥಳೀಯ ಶಾಸಕ ಸಿ.ಪುಟ್ಟರಂಗ ಶೆಟ್ಟಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರಸ್ತುತ ನಗರಸಭೆಯಲ್ಲಿನ ಪೌರಾಯುಯಕ್ತರ ಹುದ್ದೆಯಲ್ಲಿರುವ ಮೂಲತಹ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದರ್ಜೆಯ ರಾಮದಾಸ್ ಇವರು ಮಡಿಕೇರಿ ನಗರಸಭೆಯಿಂದ ಬಂದವರು.
ಕಳೆದ ವಿಧಾನ ಸಭೆ ಚುನಾವಣೆ ವೇಳೆ ಕೊಡಗಿನಿಂದ ಚಾಮರಾಜನಗರ ನಗರಸಭೆಗೆ ಬರಲು ಅಂದಿನ ಪ್ರಭಾವಿ ಸಚಿವರೊಬ್ಬರಿಗೆ ಭಾರೀ ಪ್ರಮಾಣದ ಕಪ್ಪ ಕಾಣಿಕೆ ಅರ್ಪಿಸಿ ಬಂದ ಇವರು ಇಲ್ಲೇ ಠಿಕಾಣ ಹೂಡಿ ಚೆಲ್ಲಿದ್ದನ್ನು ಬಾಚಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದಾರೆಂಬುದು ಜಗಜ್ಜಾಹೀರಾತಿನ ಸಂಗತಿ. ನಗರಸಭೆ ವ್ಯಾಪ್ತಿಯ ಬಡಾವಣೆಗಳನ್ನು ಅಭಿವೃದ್ದಿ ಪಡಿಸಲು ಮುಂದಾಗಲಿಲ್ಲ.
ಪೌರಾಯುಕ್ತ ರಾಮದಾಸ್ ಎಷ್ಟರ ಮಟ್ಟಿಗೆ ಅಕ್ರಮಕ್ಕೆ ನಿಂತಿದ್ದಾರೆಂದರೆ ನಗರಸಭೆ ವ್ಯಾಪ್ತಿಯಲ್ಲಿ ಯಾವುದಾದರೂ ವಾಣಿಜ್ಯ ಕಟ್ಟಡಗಳು ನಗರಸಭೆ ಲೈಸೆನ್ಸ್ ಅರ್ಜಿ ಸಲ್ಲಿಸಿದರೆ ನೇರವಾಗಿ ಡೀಲ್ ಕುದುರಿಸುವುದು ಡೀಲ್‍ಗೆ ಬಗ್ಗದಿದ್ದರೆ ಲೈಸೆನ್ಸ್ಗಾಗಿ ಸಲ್ಲಿಸಿರುವ ಪೈಲನ್ನು ಯಾವುದೋ ಕುಂಟು ನೆಪವೊಡ್ಡಿ ರಿಜೆಕ್ಟ್ ಮಾಡುವರೆಂಬ ಗಂಭೀರ ಆರೋಪಗಳು ನೊಂದವರಿಂದ ಕೇಳಿ ಬಂದಿವೆ. ಇದಕ್ಕೆ ಸ್ಪಷ್ಟ ಪುರಾವೆಯಾಗಿ ಚಿಕ್ಕ ಅಂಗಡಿ ಬೀದಿಯಲ್ಲಿ ಡಾ.ಬಸವರಾಜೇಂದ್ರರವರ ಕ್ಲಿನಿಕ್ ಇರುವ ವಾಣಜ್ಯ ಸಂಕೀರ್ಣದ ಮಾಲೀಕರಿಂದ ಬೆಂಗಳೂರಿನಲ್ಲಿ ಡೀಲ್ ಕುದುರಿಸಿ ಲಕ್ಷಾಂತರ ರೂಪಾಯಿಗಳನ್ನು ವಸೂಲಿ ಮಾಡಿದ ನಂತರವೇ ಪರವಾನಗಿ ನೀಡಿರುವುದಾಗಿ ಗುಸು ಗುಸು ಮಾತು ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!