ಉದಯವಾಹಿನಿ, ಮಂಗಳೂರು : ಡಿವೈಎಫ್‌ಐ ರಾಜ್ಯ ಸಮ್ಮೇಳನವು ಫೆಬ್ರವರಿ ೨೫ ರಿಂದ ೨೭ ರವರೆಗೆ ಮಂಗಳೂರಿನ ತೊಕ್ಕೊಟ್ಟಿನಲ್ಲಿ ನಡೆಯಲಿದೆ.
ಇದರಂಗವಾಗಿ ಉಳ್ಳಾಲ ತಾಲೂಕಿನ ಹರೇಕಳದಲ್ಲಿ ಡಿವೈಎಫ್‌ಐ ಸಂಘಟನೆಯ ರಾಜ್ಯ ಸಮಾವೇಶದ ಪ್ರಚಾರಕ್ಕಾಗಿ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಕಟೌಟ್ ತೆಗೆಯುವಂತೆ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ.ಇದರ ಪ್ರಚಾರಕ್ಕಾಗಿ ಹರೇಕಳ ಡಿವೈಎಫ್‌ಐ ಸಮಿತಿಯು ೬ ಅಡಿ ಎತ್ತರದ ಟಿಪ್ಪು ಸುಲ್ತಾನ್ ಅವರ ಕಟೌಟ್ – ಬ್ಯಾನರ್ ಬಂಟಿಂಗ್ಸ್‌ಗಳನ್ನು ಹಾಕಿದೆ. ಆದರೆ ಯಾವುದೇ ಅನುಮತಿಯಿಲ್ಲದೆ ಹಾಕಿರುವ ಕಟೌಟ್ ತೆರವು ಮಾಡುವಂತೆ ಕೊಣಾಜೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಹರೇಕಳ ಡಿವೈಎಫ್‌ಐ ಸಮಿತಿ ಅಧ್ಯಕ್ಷರಿಗೆ ಈ ಸೂಚನೆ ನೀಡಲಾಗಿದೆ. ಎಲ್ಲ ಧರ್ಮದ ದಾರ್ಶನಿಕರ ಫೋಟೋ, ಕಟೌಟ್ ಹಾಕಿದ್ದೇವೆ. ಆದ್ದರಿಂದ ಪರವಾನಿಗೆ ಪಡೆದಿಲ್ಲ ಟಿಪ್ಪು ಕಟೌಟ್ ತೆರವುಗೊಳಿಸುವುದಿಲ್ಲ ಎಂದು ಡಿವೈಎಫ್‌ಐ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
