ಉದಯವಾಹಿನಿ, ಬಳ್ಳಾರಿ: ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿಯ ತೇರಿನ ಸ್ಟೇರಿಂಗ್ ನ ಬೇರಿಂಗ್ ಮೂರಿದು‌ ಕಾರಣಕ್ಕೆ ರಥೋತ್ಸವ ಅರ್ಧಕ್ಕೆ ಮೊಟಕು ಗೊಂಡಿದೆ.
ಪ್ರತಿ ವರ್ಷದಂತೆ ತೇರನ್ನು ಅಲಂಕರಿಸಿ ನಿನ್ನೆ ಬೆಳಿಗ್ಗೆ ಮಡಿ ತೇರು ಎಳೆಯಲಾಗಿತ್ತು. ಸಂಜೆ 4.30 ಕ್ಕೆ ರಥೋತ್ಸವ ಸಡಗರ ಸಂಭ್ರಮದಿಂದ ಸಾಗಿತು. ಜಯ ಘೋಷಗಳ ಮಧ್ಯೆ ಜನತೆ ಹೂ ಹಣ್ಣು ಅರ್ಪಿಸಿ ನಮಿಸಿದರು.
ತೇರು ಸುಗಮವಾಗಿಯೇ ಸಾಗಿ ದೊಡ್ಡ ಮಾರುಕಟ್ಟೆ ಬಳಿಯ ನೀಲಕಂಠೇಶ್ವರ ದೇವಸ್ಥಾನದ ಬಳಿ ಬಂದಾಗ ಸನ್ನೆ ಹಾಕುವವರ ಕೈನಲಿದ್ದ ತೇರಿನ ಸ್ಟೇರಿಂಗ್ ನ ಬೇರಿಂಗ್ ಮುರಿದು. ಸನ್ನೆ ಬೀಳದಂತಾಗಿತು.
ಇದರಿಂದ ಸಾರ್ವಜನಿಕವಾಗಿ ತೇರನ್ನು ಮುಂದೆ ಸಾಗಿಸುವುದು ಸುರಕ್ಷ ಅಲ್ಲ ಎಂದು ಸಚಿವರು, ಶಾಸಕರು, ಅಧಿಕಾರಿಗಳು ಚರ್ಚಿಸಿ. ತೇರನ್ನು ಅಲ್ಲಿಯೇ ನಿಲ್ಲಿಸಿ. ದೇವರ ಮೂರ್ತಿಯನ್ನು ಉತ್ಸವದಲ್ಲಿ ತೆಗೆದುಕೊಂಡು ಹೋಗಿ‌ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದೆ.
ಇಂದು ದುರಸ್ತಿ ಮಾಡಿ ತೇರನ್ನು ಯತಾ ಸ್ಥಳಕ್ಕೆ ತರುವ ಕಾರ್ಯ ನಡೆಯಿತು.
ಈ‌ ಹಿಂದೆ ಇದ್ದ ತೇರಿನ‌ ಇರಿಸು ಮುರಿದು ಬಿದ್ದಿದ್ದರಿಂದ. ಈ ಹೊಸ ತೇರನ್ನು ಮಾಡಲಾಗಿತ್ತು.

 

Leave a Reply

Your email address will not be published. Required fields are marked *

error: Content is protected !!