ಉದಯವಾಹಿನಿ, ಕೋಲಾರ : ಸಿದ್ಧ ಸಮಾಧಿ ಯೋಗ ತರಬೇತಿ ನಂತರ ನಿತ್ಯ ಸಮಾಧಿ ಯೋಗ ತರಬೇತಿ ಶಿಬಿರವನ್ನು ಬೆಗ್ಲಿ ಹೊಸಹಳ್ಳಿ ಚೌಡೇಶ್ವರಿ ದೇವಸ್ಥಾನ ಸಮುದಾಯ ಭವನದಲ್ಲಿ ಎಸ್‌ಎಸ್‌ವೈ ಗುರೂಜಿ ಡಾ.ಪೋಸ್ಟ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಮೂರು ದಿನ ಹಮ್ಮಿಕೊಳ್ಳಲಾಗಿತ್ತು.
ತರಬೇತಿಯಲ್ಲಿ ನಿತ್ಯ ಧ್ಯಾನ ಸೋಹಂ ಧ್ಯಾನ ಸ್ಥಿತ ಪ್ರಜ್ಞ ಧ್ಯಾನ ರಿತಂಬರ ಪ್ರಜ್ಞ ಧ್ಯಾನ ಪ್ರಾಣಾಯಾಮ ದಶಮುದ್ರ ಹಾಗೂ ಯೋಗ ತರಬೇತಿ ಗಾಯತ್ರಿ ದೀಕ್ಷಾ ಧ್ಯಾನ ಇತರೆ ತರಬೇತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಅರ್ಚಕರಾದ ಭಾನುಪ್ರಕಾಶ್, ವಿಜಯಲಕ್ಷ್ಮಿ, ಕಮಲಮ್ಮ, ಬೈರಮ್ಮ, ಜಯಲಕ್ಷ್ಮಮ್ಮ, ಶಾಂತಮ್ಮ, ಮಂಗಮ್ಮ, ವೆಂಕಟಮ್ಮ, ಸರಸ್ವತಮ್ಮ, ಬಿಜೆಪಿ ಲಕ್ಷ್ಮಮ್ಮ, ಸರೋಜಮ್ಮ, ಅನ್ನದಾತ ಚಟ್ನಹಳ್ಳಿ ನಾರಾಯಣಸ್ವಾಮಿ, ಅಭಿಷೆಕ್ ಗೌಡ, ಕುಪ್ಪಳ್ಳಿ ಕೆ.ವಿ.ಆರ್.ಗೌಡ, ಕುಪ್ಪಳ್ಳಿ ಶೋಬಮ್ಮ, ಧನಲಕ್ಷ್ಮಿ, ವಕೀಲ ಸತೀಶ್, ನಾರಾಯಣಪ್ಪ, ದೃತಿ ಎಸ್.ಗೌಡ, ಹನುಮಪ್ಪ ಮುಂತಾದವರು ಭಾಗವಹಿಸಿದ್ದರು
