ಉದಯವಾಹಿನಿ, ಮಾಲೂರು: ಪಟ್ಟಣದ ಶ್ರೀ ಶಿರಡಿ ಸಾಯಿಬಾಬ ದೇವಾಲಯದಲ್ಲಿ ೧೫ ನೇ ವಾರ್ಷಿಕೊತ್ಸವದ ಪ್ರಯುಕ್ತ ಗುರುವಾರ ಬೆಳಗಿನ ಜಾವ ಬಾಬಾ ಗೆ ಸುಪ್ರಭಾತ ಸೇವೆ ಕಾಕಡಾರತಿ ಮೂಲ ದೇವರಿಗೆ ಕ್ಷೀರಾಭಿಷೇಕ ಜರುಗಿತು.
ಸಾಯಿ ಭಜನೆ ಮಂಡಳಿ ವತಿಯಿಂದ ವಿಷ್ಣು ಸಹಸ್ರ ನಾಮ ಭಕ್ತಾದಿಗಳಿಂದ ಕ್ಷೀರಾಭಿಷೇಕ ಮಹಾ ಗಣಪತಿ ಹೋಮ ಶ್ರೀ ದತ್ತಾತ್ರೇಯ ಹೋಮ ಮೂಲಮಂತ್ರ ಹೋಮ ಸಾಮೂಹಿಕ ಬಸ್ಮರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕ್ಷೇತ್ರನಹಳ್ಳಿ ಗೀತಮ್ಮ ವೆಂಕಟೇಶ್ ಗೌಡ ಅವರು ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿ ಕೊಟ್ಟಿರುವ ದ್ವಾರ ಬಾಗಿಲು ಉದ್ಘಾಟನೆ ದ್ವಾರ ಬಾಗಿಲು ಸಾಯಿಬಾಬಾ ಭಕ್ತರು ದೇವಾಲಯಕ್ಕೆ ಆಗಮಿಸಿಬಾಬಾ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು
ಶಿರಡಿ ಸಾಯಿಬಾಬ ಮಂದಿರ ಪ್ರತಿಷ್ಟಾಪನೆ ಗೊಂಡು ೧೫ವರ್ಷಗಳು ಕಳೆದಿದೆ ಪ್ರತಿ ವರ್ಷ ಸಮಿತಿಯವರು ಭಕ್ತಾದಿಗಳ ಸಹಕಾರದಿಂದ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಾರ್ಷಿಕೋತ್ಸವ ನಡೆಸುತ್ತಾ ಬಂದಿದ್ದಾರೆ ಪ್ರಸಕ್ತ ವರ್ಷ ೧೫ನೇ ವರ್ಷದ ವಾರ್ಷಿಕೋತ್ಸವ ನಡೆಯುತ್ತಿದ್ದು ಗುರುವಾರ ಬೆಳಗ್ಗೆ ಪ್ರಧಾನ ಅರ್ಚಕರಾದ ನಾಗರಾಜ್ ಭಟ್ಟರು ಹಾಗೂ ರಾಮಮೂರ್ತಿಯವರ ನೇತೃತ್ವದಲ್ಲಿ ಬೆಳಗ್ಗೆ ೫:೦೦ ಗಂಟೆಗೆ ಸುಪ್ರಭಾತ ಸೇವೆ ಕಾಕಡಾರತಿ ಮೂಲ ದೇವರಿಗೆ ಶ್ರೀರಾಮ ಶೇಖರ್ ತಾಯಿ ಭಜನೆ ಮಂಡಳಿ ವತಿಯಿಂದ ವಿಷ್ಣು ಸಹಸ್ರ ಪಾರಾಯಣ ಹಾಗೂ ಭಕ್ತಾದಿಗಳ ಸಹಕಾರದಿಂದ ಮಹಾಗಣಪತಿ ಹೋಮ ದತ್ತಾತ್ರೇ ಹೋಮ ಮೂಲ ಮಂತ್ರ ಹೋಮ ಸಾಮೂಹಿಕ ಲಕ್ಷ ಬಸ್ ಮಾರ್ಚ್ ನೆ ಹಾಗೂ ೧೨ ಗಂಟೆಗೆ ಮಹಾಮಂಗಳಾರತಿ ನಡೆಯಿತು
