ಉದಯವಾಹಿನಿ, ಕಮಲನಗರ: ಪೊಲೀಸ್ ಎಂದರೆ ಸಾಮನ್ಯವಾಗಿ ಮಕ್ಕಳು ಭಯ ಪಡುವುದು ಸಹಜ. ಭಯ ತೊಲಗಿಸಿ, ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸ್  ಸಹಾಯ ಪಡೆಯಲು ಮಕ್ಕಳ ಸ್ನೇಹಿ ವಾತವರಣ ಸೃಷ್ಟಿಸಲು ತೆರೆದ ಮನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಿಎಸ್‍ಐ ಆಶಾ ರಾಠೋಡ್ ಹೇಳಿದರು.
ಪಟ್ಟಣದ ಪೆÇಲೀಸ್ ಠಾಣೆಯ ಸಭಾಂಗಣದಲ್ಲಿ ಗುರುವಾರ ಭಾಗಿರಥಿ ಪಬ್ಲಿಕ್ ಶಾಲೆ ಮಕ್ಕಳೊಂದಿಗೆ ಹಮ್ಮಿಕೊಂಡಿದ್ದ ಪಾಠ-ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಲಾ ಮ್ಕಳನ್ನು ವಾರದಲ್ಲಿ ಒಂದು ದಿನ ಬೆಳಿಗ್ಗೆ 10:30 ರಿಂದ 4:30 ರೊಳಗೆ ಠಾಣೆಗೆ ಕರೆತಂದು ಪೊಲೀಸ್ ಇಲಾಖೆ ಬಗ್ಗೆ ವಿವರವಾದ ಮಾಹಿತಿ ನೀಡಲಾಗುತ್ತಿದೆ. ಹಾಗೆಯೇ ಠಾಣಾಧಿಕಾರಿಯು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಲಾಗುವುದು ಎಂದರು.
ಕೈಗೆ ಬೇಡಿ ಏಕೆ ಹಾಕ್ತಾರೆ, ಮಕ್ಕಳನ್ನು ಜೈಲಿನಲ್ಲಿ ಇಟ್ಟುಕೊಳ್ಳುವುದಿಲ್ಲವೇ, ಪಿಸ್ತೂಲ್, ಎಸ್‍ಎಲ್‍ಆರ್, 303, ಸಿಎನ್‍ಜಿ ಯಾವಾಗ ಬಳಸುತ್ತೀರಾ, ಕಳ್ಳರು ಹಿಡಿದು ಏನ್ ಮಾಡುತ್ತೀರಾ ಇದು ಪೆÇಲೀಸ್ ಇಲಾಖೆಯ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು ಠಾಣೆಯಲ್ಲಿ ಕುತೂಹಲದ ಪ್ರಶ್ನೆಗಳನ್ನು ಠಾಣಾಧಿಕಾರಿಗೆ ಕೇಳಿ ಗೊಂದಲ ನಿವಾರಿಸಿಕೊಂಡರು.
ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಮಾತನಾಡಿ, ಪೆÇಲೀಸರೆಂದರೆ ಹೆದರುತ್ತಿದ್ದ ಮಕ್ಕಳು ಈಗ ಧೈರ್ಯವಾಗಿ ಮಾತನಾಡುತ್ತಾರೆ. ಬಾಲ್ಯವಿವಾಹ ಮಾಡಲು ಮುಂದಾದರೆ ಏನು ಮಾಡಬೇಕು, -ಶಿಕ್ಷಕರು ಹೊಡೆಯುತ್ತಾರೆ, ಶಾಲೆಗಳ ಬಳಿ ಕಿಡಿಗೇಡಿಗಳು ರೇಗಿಸುತ್ತಾರೆ, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ , ಹೆಲ್ಪಲೈನ್ 1098, 112, ವಾಕಿಟಾಕಿ ಬಳಸುವುದು.ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಕೇಳಿದ್ದಕ್ಕೆ ಉತ್ತರ ನೀಡಿ .
ಮಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಯಾವುದನ್ನು ಮಾಡಬೇಕು, ಮಾಡಬಾರದು ಎಂಬುದರ ತಿಳುವಳಿಕೆ ನೀಡಿದ್ದು ತುಂಬಾ ಉಪಯೋಗಕಾರಿ ಮಾಹಿತಿ ನೀಡಿದ್ದು ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಎಸ್‍ಐ ಶಿವರಾಜ, ಎಎಸ್‍ಐ ಎಂಡಿ. ನಸುರಲ್, ಸಿಬ್ಬಂದಿ ಶಿವಾನಂದ ರಾಠೋಡ್, ವಸಂತ, ಸುನೀತಾ, ಶಿಕ್ಷಕಿ ರಾಜಶ್ರೀ ಶ್ರೀಗಿರೆ, ಶೀತಲ ಹಂಗರಗೆ, ಸಪನಾ ಉದಗೀರಕರ್, ನಾಗೇಶ ಮಾಳಿವಾಡೆ, ಲೋಕೇಶ ತೆಲಂಗ್ ಹಾಗೂ ಮಕ್ಕಳು ಇದ್ದರು.

Leave a Reply

Your email address will not be published. Required fields are marked *

error: Content is protected !!