ಉದಯವಾಹಿನಿ, ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಶುದ್ಧ ವಿಜ್ಞಾನ ನಿಕಾಯದ ಡೀನ್ ಪ್ರೊ. ವಿಜಯಕುಮಾರ ಬಿ. ಮಲಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಪ್ರಭಾರ ಕುಲಪತಿಯಾಗಿದ್ದ ಡಾ.ಅನಂತ್ ಎಲ್. ಝಂಡೇಕರ್ ಅಧಿಕಾರವನ್ನು ಇಂದು ಹಸ್ತಾಂತರ ಮಾಡಿದ್ದಾರೆ.
ಖಾಯಂ ಕುಲಪತಿಯ ನೇಮಕದ ವಿಳಂದಿಂದ ಇವರು ಪ್ರಭಾರಿ ಮೂರನೇ ಕುಲಪತಿಗಳಾಗಿದ್ದಾರೆ.
ಸರ್ಕಾರಕ್ಕೆ ಕುಲಪತಿಗಳ ನೇಮಕಕ್ಕೆ ಆಯ್ಕೆ ಸಮಿತಿ ಶಿಫಾರಸು ಮಾಡಿದ್ದರೂ‌, ತಮಗೆ ಬೇಕಾದವರು ಯಾರು ಎಂಬುದನ್ನು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ವಿಳಂಬ ಮಾಡಲಾಗುತ್ತಿದೆಂದು ಹೇಳಲಾಗುತ್ತಿದೆ. ವಿವಿಗೆ ಖಾಯಂ ಕುಲಪತಿಗಳಿಲ್ಲದೆ ಶೈಕ್ಷಣಿಕ, ಹಾಗು ಭೌತಿಕ ಪ್ರಗತಿಗೂ ಹೊಡೆತ ಬಿದ್ದಿದೆ ಎನ್ನಬಹುದು.

Leave a Reply

Your email address will not be published. Required fields are marked *

error: Content is protected !!