ಉದಯವಾಹಿನಿ, ಚಾಮರಾಜನಗರ: ಡಾ.ರಾಜ್‍ಕುಮಾರ್ ಕುಟುಂಬZ್ಪ ಕುಡಿ ಯುವ ರಾಜ್‍ಕುಮಾರ್ ಅವರಿಂದು ಗಾಜನೂರಿನ ಮನೆಗೆ ಭೇಟಿ ಕೊಟ್ಟುತಾ ಹಾಗೂ ಅಪ್ಪು ಅವರ ನೆಚ್ಚಿನ ತಾಣ ಆಲದಮರದ ತೋಪಿಗೆ ತೆರಳಿ ವಿಶ್ರಮಿಸಿದ್ದಾರೆ.
ಇನ್ನು, ನೆಚ್ಚಿನ ನಟನನ್ನು ಕಾಣಲು ಅಭಿಮಾನಿಗಳು ಮುಗಿಬಿದ್ದಿದ್ದು ಸೆಲ್ಪಿ ತೆಗೆದುಕೊಳ್ಳಲು ತಾಮುಂದು- ನಾಮುಂದು ಎಂಬಂತೆ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.
ಗಾಜನೂರಿನ ಮನೆ ಸಮೀಪ ಇರುವ ಆಲದಮರ ತೋಪು ಅಣ್ಣಾವ್ರ ನೆಚ್ಚಿನ ತಾಣವಾಗಿತ್ತು. ತವರಿಗೆ ಬಂದಾಗಲೆಲ್ಲಾ ಹೆಚ್ಚಿನ ಸಮಯವನ್ನು ಆಲದ ಮರದ ಬಳಿ ಕಳೆಯುತ್ತಿದ್ದರು.
ಇನ್ನು, ಪುನೀತ್‍ರಾಜ್‍ಕುಮಾರ್ ಕೂಡ ಸಾಕಷ್ಟು ಬಾರಿ ಆಲದ ಮರದ ಬಳಿ ಕುಳಿತು ಫೆÇೀಟೋ ಕ್ಲಿಕ್ಕಿಸಿಕೊಂಡಿದ್ದರು.
