ಉದಯವಾಹಿನಿ, ಬಳ್ಳಾರಿ: ಜನರ ಪರವಾಗಿ ಹೋರಾಟ ಮಾಡಲು ನಾನು ಬೇಕು ಎನ್ನವದು ಜನರ ಆಸೆಯಾಗಿದೆಂದು ಮಾಜಿ ಸಚಿವ ಶ್ರೀರಾಮುಲು ಅವರ ಹೇಳಿಕೆಯಾಗಿದೆ.
ಬಳ್ಳಾರಿ ಲೋಕಸಭೆಗೆ ಪರೋಕ್ಷವಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ತಾವೊಬ್ಬರೇ ಎಂದು ಹೇಳುವ ಶ್ರೀರಾಮುಲು ಅವರು. ಹಾಲಿ ಸಂಸದ ದೇವೇಂದ್ರಪ್ಪ ಅವರ ಮೇಲೆ ಅಭಿಮಾನವಿದೆ. ಆದರೆ ಶ್ರೀರಾಮುಲು ರಾಜಕೀಯದಲ್ಲಿ ಮತ್ತಷ್ಟು ಬೆಳೆಯಬೇಕು ಎಂದು ದೇವೇಂದ್ರಪ್ಪ ಇಚ್ಛೆ ಪಡ್ತಾರೆ. ನಾನು ಸೋತಾಗ ರಾಜ್ಯದ ಜನರು ಸಾಕಷ್ಟು ನೋವು ಅನುಭವಿಸಿದ್ದಾರೆ ಬಳ್ಳಾರಿಯ ಜನರು ಕೂಡ ಒಬ್ಬ ದೊಡ್ಡ ಮನುಷ್ಯನನ್ನು ಕಳೆದುಕೊಂಡಿದ್ದೇವೆ ಎನ್ನುತ್ತಿದ್ದಾರೆನ್ನುತ್ತಾರೆ.
ಹಾಲಿ ಸಂಸದ ವೈ.ದೇವೇಂದ್ರಪ್ಪ ಸ್ಪರ್ಧೆ ಮಾಡೋದಾದ್ರೇ ನನ್ನ ಅಭ್ಯಂತರವಿಲ್ಲ. ಆದರೆ ಪಕ್ಷ ಅವಕಾಶ ನೀಡಿದ್ರೇ ನಾನು ಸ್ಪರ್ಧೆ ಮಾಡ್ತೇನೆ ಎನ್ನುತ್ತಾರೆ.
ವಿಧಾನ ಸಭೆ ಚುನಾವಣೆ ವೇಳೆ ರಾಯಚೂರು ಬಳ್ಳಾರಿ, ಕೊಪ್ಪಳ ಚಿತ್ರದುರ್ಗ ಎಲ್ಲೆಡೆ ಪ್ರಚಾರ ಮಾಡಿದ್ದೇನೆ.
ಮೋದಿ ಹವಾ ಮೇಲೆ ಮೋದಿ ಹೆಸರಲ್ಲಿ ಎಷ್ಟು ಬಾರಿ ಸ್ಪರ್ಧೆ ಮಾಡ್ತಿರಾ. ಸ್ವಂತ ವರ್ಚಸ್ಸು ಬೆಳೆಸಿಕೊಳ್ಳಿ ಎಂದು ಪಕ್ಷ ಸೂಚಿಸಿದೆ. ಮೋದಿ ವಿಶ್ವಾಸದಲ್ಲಿ ಸೇ 80 ರಷ್ಟು, ಅಭ್ಯರ್ಥಿ ಶೇ ರಷ್ಡು ಶಕ್ತಿಯುತವಾಗಿರಬೇಕು.
ಆಗ ಅಭ್ಯರ್ಥಿ ಗೆಲ್ತಾರೆನ್ನುತ್ತಾರೆ.
