ಉದಯವಾಹಿನಿ, ಕಲಬುರಗಿ: ಅನ್ನಪೂರ್ಣ ಕ್ರಾಸ್ ಬಳಿಯ ಕಲಾ ಮಂಡಳದಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯ ಸಂಗೀತ ವಿಭಾಗದ ಡಾ.ಲಕ್ಷ್ಮೀಶಂಕರ ಜೋಶಿ ರಚನೆಯ ‘ನಾದವನು ಧೇನಿಸುತ’ ಕೃತಿ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಗಮೇಶ್ವರ ಮಹಿಳಾ ಮಂಡಳ ಅಧ್ಯಕ್ಷೆ ವೈಶಾಲಿ ದೇಶಮುಖ ಮತ್ತು ಸಂಗೀತ ಸಾಧನಾ ಕೇಂದ್ರದ ಕಾರ್ಯದರ್ಶಿ ಪ್ರೀತಿ ತಿಳಿಸಿದ್ದಾರೆ.
ಸಂಗೀತ ಸಾಧನಾ ಕೇಂದ್ರ ಮತ್ತು ಸಂಗಮೇಶ್ವರ ಮಹಿಳಾ ಮಂಡಳ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ‘ಸ್ವರ ಸಾದ್ವಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಶಾಂಕ್ ಹೆರೂರ ಅವರ ಹಿಂದಿ ಅನುವಾದ “ನಾದ ಕೆ ಧ್ಯಾನ ಮೇಂ’ ಪುಸ್ತಕವನ್ನು ಗುವಿಗು ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ಪರಿಮಳಾ ಅಂಬೇಕ ಬಿಡುಗಡೆ ಮಾಡಲಿದ್ದಾರೆ. ಬಾಗಲಕೋಟ ವಿಶ್ರಾಂತ ಸಂಗೀತ ಪ್ರಾಧ್ಯಾಪಕ ಡಾ.ಸಿದ್ಧರಾಮಯ್ಯ ಮಠಪತಿ ಕೃತಿಗಳನ್ನು ಪರಿಚಯ ಮಾಡಲಿದ್ದಾರೆ. ಗುವಿಗು ಕಲಾನಿಕಾಯದ ಡೀನರಾದ ಪೆÇ್ರಅಬ್ದುಲ್ ರಬ್ ಉಸ್ತಾದ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
