ಉದಯವಾಹಿನಿ, ಮುನವಳ್ಳಿ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರದಲ್ಲಿ ಶಿವರಾತ್ರಿ ಅಂಗವಾಗಿ ರೈತ ಸಶಕ್ತಿಕರಣ ಸಮಾರಂಭ ಜರುಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜಯೋಗಿನಿ ಅಂಬಿಕಾ ಅಕ್ಕನವರು ಭಗವಂತನ ಸತ್ಯ ಪರಿಚಯ ಹಾಗೂ ಆಧ್ಯಾತ್ಮಿಕ ಅಳವಡಿಸಿಕೊಂಡು ಸಂಸ್ಕಾರ ಭರಿತ ಜೀವನಕ್ಕಾಗಿ ಒಳ್ಳೆಯ ಕೃಷಿಕರಾಗಿ ಆರೋಗ್ಯವಂತರಾಗಿರಬೆಕೆಂದರು. ಬಿಕೆ ಪ್ರಭಾ, ರಾಘವೇಂದ್ರ, ಶ್ರೀಧರ, ಶಾಂತಕ್ಕ, ಶೇಖರ ಮಾತನಾಡಿದರು.
ಬಿಕೆ ವಿದ್ಯಾ ಸ್ವಾಗತಿಸಿದರು, ಲತಾ ವಂದಿಸಿದರು. ಸುತ್ತಮುತ್ತಲಿನ ಬ್ರಹ್ಮಾವತ್ಸರು ನಾಗರಿಕರು ಇತರರು ಉಪಸ್ಥಿತರಿದ್ದರು.
