
ಉದಯವಾಹಿನಿ, ಬಂಗಾರಪೇಟೆ : ತಾಲ್ಲೂಕಿನಾದ್ಯಂತ ಬರಗಾಲ ತಾಂಡವಾಡುತ್ತಿದ್ದು, ನೀರಿನ ಬವಣೆ ಹೆಚ್ಚಾಗುತ್ತಿದೆ. ರೈತರು ಮಳೆ ಬೆಳೆಇಲ್ಲದೆ ಕಂಗಾಲಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಇಂತಹ ಸಂದರ್ಭದಲ್ಲಿ ಸಣ್ಣ ರೈತರ ಜೀವನ ಅದೋಗತಿಗೆ ತಲುಪಿದೆ. ಈ ನಿಟ್ಟಿನಲ್ಲಿ ಸೂರ್ಯತೇಜ ಪೌಂಡೇಷನ್ ಅಧ್ಯಕ್ಷರಾದ ವೆಂಕಟೇಶ್ ಅವರು ಕದಿರಿಗಾನಕೊಪ್ಪದ ಬಡ ರೈತರಾದ ಮುನಿರತ್ನಮ್ಮ ಎಂಬುವವರಿಗೆ ಹಸು ಕೊಂಡುಕೊಳ್ಳಲು ಸಹಾಯ ಮಾಡಿದರು. ಇದರಿಂದ ಮುನಿರತ್ನಮ್ಮ ಅವರು ಹಾಲು ಉತ್ಪಾದನೆ ಮಾಡಿಕೊಂಡು ಹೈನುಗಾರಿಕೆ ಮೂಲಕ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು. ನಂತರ ಮುನಿರತ್ನಮ್ಮ ಮಾತನಾಡಿ, ಸೂರ್ಯತೇಜ ಪೌಂಡೇಶನ್ ತಂಡ ಸದಸ್ಯರಿಗೆ ಧನ್ಯವಾದ ತಿಳಿಸಿದರು.
