
ಉದಯವಾಹಿನಿ,ಬೆಂಗಳೂರು : ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕ ರಕ್ತ ಚಾಲನಾ ಪರಿಷತ್, ಲಯನ್ಸ್ ರಕ್ತನಿಧಿ ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ಸಹಯೋಗದೊಂದಿಗೆ ರಕ್ತದಾನ ಮಾಡುವುದು ಒಗ್ಗಟ್ಟಿನ ಪ್ರಕ್ರಿಯೆ ಈ ಪ್ರಯತ್ನಕ್ಕೆ ಕೈಜೋಡಿಸಿ ಜೀವ ಉಳಿಸೋಣ ಎಂಬ ಘೋಷವಾಕ್ಯದೊಂದಿಗೆ ರಕ್ತದಾನದ ಅರಿವು ಮೂಡಿಸುವ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಜಾಥಾಕ್ಕೆ ರಾಜಾಜಿನಗರದ ಶಾಸಕರಾದ ಸುರೇಶ್ ಕುಮಾರ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ. ಡಿ. ಜಯರಾಜು, ಡಾ. ಎನ್. ಮನೋಹರ್, ಲಯನ್ ಸುರೇಶ್ ರಾಮು, ಲಯನ್ ಎಸ್ ಮೋಹನ್ ಕುಮಾರ್, ಡಾ. ಹನುಮಂತರಾಯಪ್ಪ, ಲಯನ್ ಶಿವನಂಜಯ್ಯ, ಲಯನ್ ಮನೋಜ್ ಕುಮಾರ್, ಲಯನ್ ವಿ ಕೃಷ್ಣಮೂರ್ತಿ, ಲಯನ್ ರಾಮಕೃಷ್ಣಪ್ಪ, ಲೀಲಾವತಿ, ಲಯನ್ ಕೆ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.