ಉದಯವಾಹಿನಿ, ಮೈಸೂರು: ಮೈಸೂರು: ಆಘಾತಕಾರಿ ಘಟನೆಯೊಂದರಲ್ಲಿ, ಬಿಹಾರದ ವಲಸೆ ಕಾರ್ಮಿಕರೊಬ್ಬರು ಬುಧವಾರ ಮೈಸೂರು ಜಿಲ್ಲೆಯಲ್ಲಿ ತಮ್ಮ ಪತ್ನಿಯೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿದ್ದಾಗ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾರೆ.
ರೈಲ್ವೆ ಪೊಲೀಸರ ಪ್ರಕಾರ, ನಂಜನಗೂಡು ಪಟ್ಟಣದ ಸಮೀಪದ ಕವಲಂದೆ ಗ್ರಾಮದ ಬಳಿ ರೈಲ್ವೆ ಹಳಿಯಲ್ಲಿ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದ ಸಂತ್ರಸ್ತ ಪತ್ನಿಯೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಚಾಮರಾಜನಗರದಿಂದ ಬರುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಪ್ರಾತಿನಿಧಿಕ ಚಿತ್ರ
ರೀಲ್ಸ್ ಮಾಡೋ ಗೀಳು: ರೀಲ್ಸ್ ಮಾಡುವಾಗ ರೈಲಿಗೆ ಸಿಲುಕಿ ಮೂವರು ಯುವಕರು ಸಾವು, ನದಿಗೆ ಹಾರಿ ಇಬ್ಬರು ಬಚಾವ್!
ಮನು ನಂಜನಗೂಡು ಪಟ್ಟಣದಲ್ಲಿ ಸಹಾಯಕ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು. ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.
