ಉದಯವಾಹಿನಿ, ಚಿಟಗುಪ್ಪ: ತಾಲೂಕಿನ ಮನ್ನಾಖೇಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ನೀಡುವಂಚ ಗ್ರಾಮಕ್ಕೆ ಹೋಗುವ ರಸ್ತೆಯ ಅಕ್ಕ ಪಕ್ಕದಲ್ಲಿರುವ ಹೋಟಲ್‍ಗಳು, ಕಿರಾಣಿ ಅಂಗಡಿಗಳ ಮುಂಗಟ್ಟುಗಳು, ರಸ್ತೆ ಮೇಲಿನ ಕಲ್ಲು ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ರಸ್ತೆ ಅಗಲೀಕರಣ ಮಾಡಲಾಯಿತ್ತು. ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ಪಂಚಾಯತ ಅಧಿಕಾರಿ, ಸಿಬ್ಬಂದಿಗಳ, ಪೆÇಲೀಸ್ ಇಲಾಖೆ, ವ್ಯಾಪಾರಸ್ಥರ, ಗ್ರಾಮಸ್ಥರ ಸಹಕಾರದೊಂದಿಗೆ ತೆರೆವು ಕಾರ್ಯಾಚರಣೆ ನಡೆಸಲಾಯಿತ್ತು. ಅಂಗಡಿ ಮಾಲೀಕರಿಗೆ ಈ ಮೊದಲೇ ನೋಟಿಸ್ ನೀಡಿ ಸೂಚಿಸಲಾಗಿತ್ತು ಆದರೆ ಅಂಗಡಿ ಮಾಲೀಕರು ಕ್ಯಾರೇ ಎನ್ನದೆ ಕುಳಿತುಕೊಂಡಿದರು, ಆದ್ದರಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ ರವರು ಶೀಘ್ರದಲ್ಲೇ ಅಂಗಡಿ ಮುಂಗಟ್ಟುಗಳು ಜೆಸಿಬಿ ಯಂತ್ರದಿಂದ ತೆರವುಗೊಳಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಕುಮಾರ್ ಅಗಸಿ, ಉಪಾಧ್ಯಕ್ಷ ಮೈಮುನಿಸಾ ಬೇಗಂ ಮತ್ತು ಸರ್ವ ಸದಸ್ಯರು, ಗ್ರಾಮಸ್ಥರು ಇದ್ದರು.
