ಉದಯವಾಹಿನಿ, ಆನೇಕಲ್ : ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಚನಾಯಕನಹಳ್ಳಿ ದಿನ್ನೆಯಲ್ಲಿರುವ ಪೋಲಿಸ್ ಬಡಾವಣೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಯಡಿಯಲ್ಲಿ ಸುಮಾರು ೪ ಕೋಟಿ ೮೯ ಲಕ್ಷ ರೂಪಾಯಿ ವೆಚ್ಚದ ಮನೆ ಮನೆಗೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಜನಪ್ರತಿನಿಧಿಗಳು ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿನ್ನಕ್ಕಿ ಮಹೇಶ್, ಉಪಾಧ್ಯಕ್ಷೆ ಲಷ್ಮೀ ನಾಗೇಶ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಆರ್.ಕೆ. ಕೇಶವರೆಡ್ಡಿ, ಪ್ರಸನ್ನ ಕುಮಾರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಎಂ.ಕಿರಣ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ವಿನಯ್, ಲೋಕನಾಥ್, ರಾಮಸ್ವಾಮಿ, ಮನು, ಗೋಪಾಲ, ಪುಷ್ಪ. ಸತೀಶ್, ಅನುಸೂಯ, ಮಂಜುನಾಥ್, ಕಾಂತರಾಜ್, ಕೆಂಪೇಗೌಡ, ಶಂಕರ್ ಗೌಡ, ಶಿವರಾಜ್ ಮತ್ತು ಪೋಲಿಸ್ ಬಡಾವಣೆಯ ಮುನಿರೆಡ್ಡಿ ಮತ್ತು ಸ್ಥಳೀಯ ಮುಖಂಡರುಗಳು ಬಾಗವಹಿಸಿದ್ದರು.
