ಉದಯವಾಹಿನಿ, ಮುಳಬಾಗಿಲು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲ್ಲೂಕು ಕಾಂಗ್ರೆಸ್ ಪಕ್ಷದಿಂದ ಸಾತಂತ್ರ್ಯ ಹೋರಾಟಗಾರರ ಪತ್ನಿಯರಿಗೆ ಪಾದಪೂಜೆ ಮಾಡಿ ಸನ್ಮಾನಿಸಿದರು.
ತಾಲೂಕಿನ ಹರಪನಾಯಕನಹಳ್ಳಿ ಸ್ವಾಂತಂತ್ರ್ಯ ಹೋರಾಟಗಾರರಾದ ಕುರಿದೊಡ್ಡಿ ನಾರಾಯಣಪ್ಪರ ಪತ್ನಿ ಮುನಿ ಚೌಡಮ್ಮ, ಪಿ.ರಾಮೇಗೌಡರ ಪತ್ನಿ ನಾರಾಯಣಮ್ಮರನ್ನು ನಗರದ ಬಾಲಾಜಿ ಭವನ ಹಿಂಭಾಗ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಕಾಂಗ್ರೆಸ್ ಮುಖಂಡ ವಿ.ಆದಿನಾರಾಯಣ ಮತ್ತು ಪತ್ನಿ ವಿ.ಸುನಿತಾ ಸಮೇತ ಪಾದಪೂಜೆ ಮಾಡಿ ಸನ್ಮಾನಿಸಿ ಅರಿಶಿನ, ಕುಂಕುಮ, ಸೀರೆ ನೀಡಿ ಗೌರವಿಸಿದರು.
ಕಾಂಗ್ರೆಸ್ ಮುಖಂಡ ಆದಿನಾರಾಯಣ, ಆವನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲಾ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಗೌಡ, ವಕ್ತಾರ ಉಮಾಶಂಕರ್, ಕಾರ್ಯದರ್ಶಿ ಮಂಡಿಕಲ್ ಮಂಜುನಾಥ್, ಮುಖಂಡರಾದ ಆಲಂಗೂರು ಶಿವಣ್ಣ, ಗುಜ್ಜನಹಳ್ಳಿ ಮಂಜುನಾಥ್, ಕಸುವುಗಾನಹಳ್ಳಿ ವೆಂಕಟರಾಮ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತ್ರೀವೇಣಮ್ಮ, ನಾಗೇಶ್ವರಿ, ಶೈಲಜಾ, ನಗರಸಭೆ ಸದಸ್ಯ ಜಬ್ಬಿವುಲ್ಲಾ, ಗೊಲ್ಲಹಳ್ಳಿ ಸತೀಶ್, ಸನ್ಯಾಸಪಾಳ್ಳ ರಾಜು ಇದ್ದರು.
