ಉದಯವಾಹಿನಿ, ಮಾಲೂರು: ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸಿ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜಿಲ್ಲಾಧ್ಯಕ್ಷರು ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ, ನೂತನವಾಗಿ ಪಕ್ಷದ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ಆದ್ಯತೆ ನೀಡುವಂತೆ ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಬಿ. ಕೃಷ್ಣಪ್ಪ ಹೇಳಿದರು
ಪಟ್ಟಣದ ಅರಳೇರಿ ರಸ್ತೆಯ ಎಚ್‌ವಿಆರ್ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಪಕ್ಷವನ್ನು ಮುನ್ನಡೆಸಲು ಪಕ್ಷಕ್ಕೆ ಆಧಾರ ಸ್ಥಂಭಗಳು ಕಾರ್ಯಕರ್ತರು ಮತ್ತು ಮುಖಂಡರು ಪಕ್ಷ ಸಂಘಟನೆಗೆ ಹೆಚ್ಚು ಆಸಕ್ತಿ ವಹಿಸುವ ಇವರನ್ನು ಪಕ್ಷವು ಗುರುತಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಪಕ್ಷ ಸಂಘಟಿಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಸಂಸದ ಎಸ್.ಮುನಿಸ್ವಾಮಿ ಅವರ ಮಾರ್ಗದರ್ಶನದಂತೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಚುನಾವಣೆಗಳಲ್ಲಿ ಗಟ್ಟಿಯಾಗಿ ನಿಂತು ಪಕ್ಷದ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಜೊತೆಯಲ್ಲಿದ್ದು ಪಕ್ಷ ಕಟ್ಟುವ ಕೆಲಸ ಮಾಡುವರೆ ಕಾರ್ಯಕರ್ತರು ರಾಜಕಾರಣ ಆಸಕ್ತಿ ಪಕ್ಷ ಸಂಘಟನೆ ಉಳ್ಳವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.
ತಾಲೂಕು ಬಿಜೆಪಿ ಪಕ್ಷದ ಎಚ್.ಆರ್.ಪಂಚಾಕ್ಷರಿ, ಮಂಜುನಾಥ್, ಸದಾನಂದ, ಲಿಂಗೇಶ್, ಭಾಗ್ಯಮ್ಮ, ಭಾರತಮ್ಮ, ಉಪಾಧ್ಯಕ್ಷರು ವಿ.ಸಂತೋಷ್ ಕುಮಾರ್, ಬಾಬು, ಆನಂದ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳು ಎಲ್ ಸಂತೋಷ್ ಬಾಬು, ಗಿರೀಶ್, ಹೆಚ್.ವಿ.ನಾಗೇಶ್, ಮುನಿಕೃಷ್ಣ, ಸುಪ್ರಿಯ, ಪ್ರೀಯಾರೆಡ್ಡಿ, ಕಾರ್ಯದರ್ಶಿಗಳು, ಎಂಎನ್ ವೇಣುಗೋಪಾಲ್ ಖಜಾಂಚಿ, ಟಿ.ಮುನಿರಾಜು, ಕೃಷ್ಣಪ್ಪ, ಲಕ್ಕಪ್ಪ, ಶಂಕರಪ್ಪ, ನಂಜುಂಡಪ, ಕಾರ್ಯಕಾರಿಣಿ ಸಮಿತಿ ಸದಸ್ಯರು.
ಬಿಜೆಪಿ ನಗರ ಮೋರ್ಚಾ ಪದಾಧಿಕಾರಿಗಳಾಗಿ ರಾಮಮೂರ್ತಿ ಅಧ್ಯಕ್ಷರು, ಎಂ ಎನ್ ವಿಜಯ್ ಕುಮಾರ್ ಚಲಪತಿ ಪ್ರಧಾನ ಕಾರ್ಯದರ್ಶಿಗಳು, ಮಂಜುನಾಥ್, ವೆಂಕಟೇಶ್, ರಾಮಣ್ಣ, ಜೈರಾಮ್, ಕಾರ್ಯದರ್ಶಿಗಳು, ಪ್ರಸನ್ನ ಖಜಾಂಚಿ,
ಎಸ್ ಟಿ ಮೋರ್ಚಾ ಜಲಂಧರ್ ಅಧ್ಯಕ್ಷರು, ನಾರಾಯಣಸ್ವಾಮಿ ಮುನಿಯಪ್ಪ, ತಿಮ್ಮರಾಯಪ್ಪ, ಸಂಪತ್ ಕುಮಾರ್, ಉಪಾಧ್ಯಕ್ಷರು, ಮಂಜುನಾಥ್, ಆದಿತ್ಯ, ಪ್ರಧಾನ ಕಾರ್ಯದರ್ಶಿಗಳು, ನಾಗರಾಜ್ ಖಜಾಂಚಿ.
ಬಿಜೆಪಿ ಎಸ್ಸಿ ಮೋರ್ಚ ಕೂರಂಡಹಳ್ಳಿ ವಿ ರಾಜಪ್ಪ ಅಧ್ಯಕ್ಷರು, ನಾಗರಾಜ್, ಮಂಜುನಾಥ್, ರಾಮಾಂಜನೇಯ, ವೆಂಕಟೇಶ್, ಉಪಾಧ್ಯಕ್ಷರು ಅಂಗಸಗಿರಿಯಪ್ಪ, ರವೀಂದ್ರ ಪ್ರಧಾನ ಕಾರ್ಯದರ್ಶಿಗಳು, ತಾಲೂಕು ರೈತ ಮೋರ್ಚ ಮುನಿರೆಡ್ಡಿ ಅಧ್ಯಕ್ಷರು, ಶ್ರೀರಾಮಪ್ಪ, ರಾಮಕೃಷ್ಣಪ್ಪ, ಹರೀಶ್, ಶ್ರೀನಾಥ್ ರೆಡ್ಡಿ, ಉಪಾಧ್ಯಕ್ಷರು ಬಿ ವಿ ಸೋಮಶೇಖರ್, ನಾಗರಾಜ್, ಪ್ರಧಾನ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳಾಗಿ ಮಂಜುನಾಥ್ ಅಧ್ಯಕ್ಷರು, ಬಾಲಕೃಷ್ಣಪ್ಪ, ಎಲ್ ಚಂದ್ರಪ್ಪ, ಶ್ರೀಧಮೂರ್ತಿ, ಆನಂದ್, ಉಪಾಧ್ಯಕ್ಷರು, ಎನ್ ಶ್ರೀನಿವಾಸ್, ಜಗನ್ನಾಥ್ ಪ್ರಧಾನ ಕಾರ್ಯದರ್ಶಿಗಳು, ಗೋಪಾಲ್ ಖಜಾಂಚಿ,
ಯುವ ಮೋರ್ಚಾ ತಾಲೂಕು ಪದಾಧಿಕಾರಿಗಳಾಗಿ ವಿನೋದ್ ಅಧ್ಯಕ್ಷರು, ಮಂಜುನಾಥ್ ರೆಡ್ಡಿ, ನಂದೀಶ್, ಮಂಜುನಾಥ್, ಸಾಯಿ ವೆಂಕಟೇಶ್ ಉಪಾಧ್ಯಕ್ಷರು, ಶ್ರವಣ್, ಪ್ರಶಾಂತ್, ಪ್ರಧಾನ ಕಾರ್ಯದರ್ಶಿಗಳು ವೆಂಕಟೇಶ್ ಖಜಾಂಚಿ,
ಮಹಿಳಾ ಮೋರ್ಚಾ ಪದಾಧಿಕಾರಿಗಳಾಗಿ ಅನಿತಾ ನಾಗರಾಜ್ ಅಧ್ಯಕ್ಷರು, ಸವಿತಾ, ವಿಜಯಲಕ್ಷ್ಮಿ, ಮಾಲಾ, ಗೀತಾ, ಉಪಾಧ್ಯಕ್ಷರು, ಭಾಗ್ಯಮ್ಮ, ಪ್ರೀತಿ, ಪ್ರಧಾನ ಕಾರ್ಯದರ್ಶಿಗಳು, ಉಮಾದೇವಿ ಖಜಾಂಚಿ,
ಹೋಬಳಿ ಶಕ್ತಿ ಕೇಂದ್ರಗಳಗೆ ಲಕ್ಕೂರು ರಾಜಣ್ಣ, ಮಾಸ್ತಿ ಶೇಖರ್, ಕುಡಿಯನೂರು ಮಿಥುನ್, ಟೇಕಲ್ ಗೋಪಾಲ್, ತೊರ್‍ನಹಳ್ಳಿ ಸುನಿಲ್, ಮಾಲೂರು ನಗರ ರಾಮಚಂದ್ರ ಇವರನ್ನು ಅಧ್ಯಕ್ಷರುಗಳನ್ನಾಗಿ ಮಂಜುನಾಥ್, ಪ್ರಸನ್ನ ಗೌಡ, ಕಿರಣ್, ಅಂಬರೀಶ್, ಸಾಮಾಜಿಕ ಜಾಲತಾಣ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದರು.
