ಉದಯವಾಹಿನಿ, ಮಾಲೂರು: ಟಿಪ್ಪರ್ ಲಾರಿ ಚಾಲಕರ ಅಜಾಗುರುಕತೆ ಚಾಲನೆಯಿಂದ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಿದರೆ ಚಾಲಕರು ಹಾಗೂ ಕ್ರಷರ್‌ಗಳ ಮಾಲೀಕರನ್ನು ನೇರ ಹೋಣಿಗಾರಿಕೆ ಮಾಡಲಾಗುತ್ತದೆ ಆದ್ದರಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಮತ್ತೊಂದು ಜೀವದ ಜೊತೆ ಚೆಲ್ಲಾಟವಾಡದೇ ಟಿಪ್ಪರ್ ಲಾರಿ ವಾಹನಗಳನ್ನು ರಸ್ತೆಗಳಲ್ಲಿ ಚಾಲನೆ ಮಾಡುವಂತೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ರವಿಶಂಕರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಇತ್ತೀಚಿಗೆ ಟಿಪ್ಪರ್ ಲಾರಿಗಳಿಂದ ಆಗುತ್ತಿರುವ ಅಫಘಾತಗಳನ್ನು ನಿಯಂತ್ರಿಸುವ ಸಲುವಾಗಿ ಮಾಲೂರು, ಮಾಸ್ತಿ ಪೊಲೀಸ್ ಠಾಣಾ ಸಹಯೋಗದಲ್ಲಿ ಜಲ್ಲಿ ಕ್ರಷರ್ ಟಿಪ್ಪರ್ ಲಾರಿ ಚಾಲಕರು ಹಾಗೂ ಮಾಲೀಕರಿಗೆ ಹಮ್ಮಿಕೊಂಡಿದ್ದ ರಸ್ತೆ ಸಪ್ತಾಹ ಸುರಕ್ಷತ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯರಸ್ತೆಗಳಲ್ಲಿ ಟಿಪ್ಪರ್ ಲಾರಿಗಳ ರ್‍ಯಾಶ್ ಡ್ರೈವಿಂಗ್‌ನಿಂದ ಅಪಘಾತಗಳು ಸಂಭವಿಸುತ್ತದೆ. ಜನರ ಜೀವ ಕಳೆದುಕೊಂಡಾಗ ಸಾರ್ವಜನಿಕರು ಟಿಪ್ಪರ್ ಲಾರಿಗಳ ಚಾಲಕರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಚಾಲಕರ ಅಜಾಗರುಕತೆ ಚಾಲನೆ ಅಪಘಾತಕ್ಕೆ ಕಾರಣವಾಗುತ್ತದೆ. ಟಿಪ್ಪರ್ ಲಾರಿಗಳನ್ನು ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ಸಂಚಾರಿ ನಿಯಮಗಳನ್ನು ಅಳವಡಿಸಿಕೊಂಡು ವಾಹನಗಳು ಚಾಲಕನ ನಿಯಂತ್ರಣದಲ್ಲಿಟ್ಟು ಕೊಂಡು ಅಪಘಾತ ರಹಿತ ಚಾಲನೆ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!