ಉದಯವಾಹಿನಿ , ಹುಬ್ಬಳ್ಳಿ: ಸಮಾಜಕ್ಕೆ ಮಹಿಳೆಯ ಕೊಡುಗೆ ಅಪಾರ ಹೀಗಾಗಿ ಮಹಿಳೆಯರಿಗೆ ಸಮಾನ ಅದ್ಯತೆ ಕೊಟ್ಟಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋಹನ್ ಲಿಂಬಿಕಾಯಿ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಹಾಗೂ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವತಿಯಿಂದ ನಗರದ ಗೋಕುಲ್ ರಸ್ತೆಯ ಬಸವೇಶ್ವರ ನಗರದ ‘ವಿಶ್ವಕ್ರಮ ಚೇತನ’ ಡಾ.ಕೆ.ಎಸ್.ಶರ್ಮಾ ಕ್ಯಾಂಪಸ್ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು. ಮಹಿಳೆಗೆ ಮಹಿಳೆಯೇ ಸರಿಸಾಟಿ ಎಂದ ಅವರು ಮಹಿಳೆ ತನಗೆ ಬರುವ ಸಮಸ್ಯೆಗಳನ್ನು ಮೆಟ್ಟಿ ನಿಂತಾಗ ಮಾತ್ರ ಆ ಸಮಸ್ಯೆಗಳು ಮಜಿನಂತೆ ಕರುಗುತ್ತವೆ ಎಂದು ನುಡಿದರು.
