ಉದಯವಾಹಿನಿ, ಸಿಂದಗಿ: ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದ ನಿವಾಸಿಗಳ ಋಣ ಮನಗೂಳಿ ಮನೆತನದ ಮೇಲಿದೆ, ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ ತಮ್ಮೆಲ್ಲರಿಗೂ ಕೊಟ್ಟಿರುವ ಭರವಸೆ ಹುಸಿ ಹೋಗದಂತೆ ಹಂತ ಹಂತವಾಗಿ ಅಭಿವೃದ್ಧಿ ಪಡಿಸುತ್ತೇನೆ ಅಲ್ಪಸಂಖ್ಯಾತರ ಏಳಿಗೆಗಾಗಿ ಪ್ರಾಮಾಣಿಕ ಶ್ರಮಿಸುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪÀಟ್ಟಣದ 7ನೆಯ ವಾರ್ಡಿನ ಮಹಮ್ಮದಿಯಾ ನಗರದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಿಜಯಪುರ ಕೆಎಸ್‍ಎಚ್‍ಸಿ ಅನುಷ್ಠಾನದ 2023-24ನೆಯ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಹಮ್ಮಿಕೊಂಡ ಸಿಸಿ ರಸ್ತೆ, ಪೇವರ್ಸ್ ನಿಮಾರ್ಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ನಗರದ ಅಲ್ಪ ಸಂಖ್ಯಾತರ ಕಾಲೋನಿಗಳನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಸಚಿವ ಜಮೀರ್ ಅಹ್ಮದ ಅವರು 5ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ, ಅದರಲ್ಲಿ 2ಕೋಟಿ 85ಲಕ್ಷ ರೂ. ಅನುದಾನ ಮಹಮ್ಮದಿಯಾ ನಗರಕ್ಕೆ ಮೀಸಲು ಇಟ್ಟಿದ್ದೇವೆ 1 ಕೋಟಿ 11ಲಕ್ಷ ರೂ. ಶಿವಶಂಕರ ಬಡಾವಣೆಯಲ್ಲಿ ವಾಸಿಸುವ ಅಲ್ಪ ಸಂಖ್ಯಾತರಿಗೆ ರಸ್ತೆ ಮತ್ತು ಚರಂಡಿಗಾಗಿ ಮೀಸಲಿಟ್ಟಿದೆ. 9ನೆಯ ವಾರ್ಡಿಗೆ 45ಲಕ್ಷ ರೂ. ಮೀಸಲು. 17ನೆಯ ವಾರ್ಡ ಸರಕಾರಿ ಆಸ್ಪತ್ರೆಯ ಹಿಂದುಗಡೆ ವಾಸಿಸುವ ಅಲ್ಪ ಸಂಖ್ಯಾತರರ ಅಭುವೃದ್ದಿ 55ಲಕ್ಷ ರೂ. ಮೀಸಲಿಟ್ಟು ಒಟ್ಟು ಸಿಂದಗಿ ನಗರಕ್ಕೆ 5ಕೋಟಿ ರೂ. ಅನುದಾನ ಅಭಿವೃದ್ಧಿಗಾಗಿ ಇಟ್ಟಿದ್ದೇವೆ. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ 7ನೆಯ ವಾರ್ಡಿನ ಶಾದಿ ಮಹಲಕ್ಕೆ ಈಗಾಗಲೇ 20ಲಕ್ಷ ರೂ. ಅನುದಾನ ಮಂಜೂರಾಗಿದೆ. ಗಾಜಿ ಹುಸೇನ ದರ್ಗಾಕ್ಕೆ 30ಲಕ್ಷರೂ ಅನುದಾನ ಮೀಸಲಿಟ್ಟು ದರ್ಗಾ ಅಭಿವೃದ್ದಿಗೊಳಿಸುವೆ. ನಗರದ 23ವಾರ್ಡನಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೆ ಸರಕಾರದ ಅನುದಾನವನ್ನು ಮುಟ್ಟಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ತಂದೆಯವರ ಕಾಲದಿಂದಲೂ ನಮ್ಮ ಮನೆತನ 9ಚುನಾವಣೆ ಎದುರಿಸಿದೆ. ನಾವು ಯಾವುದೇ ಪಕ್ಷದಿಂದ ಚುನಾವಣೆಯ ಕಣಕ್ಕೆ ಇಳಿದು ಸೋಲಲಿ ಗೆಲುವು ಪಡೆದುಕೊಳ್ಳಲಿ ನಗರ ಜನತೆಯ ಆಶೀರ್ವಾದ ನಮ್ಮ ಮನೆತನದ ಮೇಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!