ಉದಯವಾಹಿನಿ, ಮೈಸೂರು: ಬಹುತೇಕ ರಾಜವಂಶಸ್ಥ ಯಧುವೀರ ಕೃಷ್ಣದತ್ತಚಾಮರಾಜ ಒಡೆಯರ್ ಅವರು ಚುನಾವಣಾ ರಾಜಕೀಯ ಪ್ರವೇಶ ಖಚಿತವಾಗುತ್ತಿರುವ ಬೆನ್ನಲ್ಲೇ ಯಧುವೀರರನ್ನು ಸಂಸದ ವಿಭಿನ್ನ ರೀತಿಯಲ್ಲೇ ಸ್ವಾಗತಿಸಲಾರಂಭಿಸಿದ್ದಾರೆ.ರಾಜವಂಶಸ್ಥರ ಸ್ಪರ್ಧೆಯ ಸುಳಿವಿನ ಬೆನ್ನಲ್ಲೇ ರಾಜ್ಯದಲ್ಲಿ ಬಹುದೊಡ್ಡ ಚರ್ಚೆಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಸಂಸದರಿಗೆ ಟಿಕೇಟ್ ತಪ್ಪುವ ಆತಂಕ ಕೊನೆ ಕ್ಷಣದಲ್ಲಿ ಅವರನ್ನು ಆತಂಕಕ್ಕೇ ಸಹ ಈಡು ಮಾಡಿದೆ. ಈ ಹಿನ್ನೆಲೆಯಲ್ಲಿ ಮಾದ್ಯಮಗಳ ಪ್ರಶ್ನೆಗೆ ವಿಭಿನ್ನವಾಗಿಯೇ ಉತ್ತರ ಕೊಡಲಾರಂಭಿಸಿದ್ದಾರೆ.
ಸಂಸದ ಪ್ರತಾಪಸಿಂಹ ಮಾದ್ಯಮಗಳೊಂದಿಗೆ ಮಾತನಾಡಿದಿದ್ದಷ್ಟು, ಅರಮನೆಯ ಎಸಿ ರೂಮ್ ನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕಲು ಯದುವೀರ್ ಬಂದರೆ ಸ್ವಾಗತ. ಅರಮನೆಯ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳು ಇವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿ ಇವೆ. ಯದುವೀರ್ ಜನಪ್ರತಿನಿಧಿಯಾಗಿ ಆಗ ಅದೆಲ್ಲವನ್ನೂ ಜನರಿಗೆ ಬಿಟ್ಟು ಕೊಡುತ್ತಾರೆಯೇ?, ಚಾಮುಂಡಿಬೆಟ್ಟದ ಮೇಲಿನ ಅರಮನೆ ಆವರಣದಲ್ಲಿ ಪೈಪ್ ಲೈನ್ ಹಾಕಲು ಅರಮನೆ ವಿರೋಧ ಇದೆ ಆ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದ್ದಾರೆ.
ಅರಮನೆ ಒಳಗಡೆ ಆರಾಮಾಗಿರುವ ವ್ಯಕ್ತಿ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟ ಮಾಡಲು ಬೀದಿಗೆ ಬಂದರೆ ನಮ್ಮಗೆ ಸಂತೋಷ ಅರಮನೆಯ ಸುಖದ ಸುಪತ್ತಿಗೆಯಲ್ಲಿ ಇದ್ದ ನಮ್ಮ ಮಹಾರಾಜರನ್ನ ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಹೇಳಿದರು.
