ಉದಯವಾಹಿನಿ, ಬೆಂಗಳೂರು : ಗೋವಿಂದರಾಜನಗರ ಮಂಡಲ ಬಿಜೆಪಿ ಕಚೇರಿ ಮುಂಬಾಗದಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಹಾಹಾಕಾರ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣ, ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ ರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಂದು ಕಂಡು ಕೇಳರಿಯದಷ್ಟು ನೀರಿಗಾಗಿ ಜನರು ಪರದಾಡುತ್ತಿದ್ದಾರೆ.
ಹಿಂದೆ ಸಚಿವರಾಗಿದ್ದ ವಿ.ಸೋಮಣ್ಣರವರ ಆಡಳಿತದಲ್ಲಿ ೭೦ಕ್ಕೂ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಲಾಗಿತ್ತು . ಕಳೆದ ಹತ್ತು ತಿಂಗಳಲ್ಲಿ ಕಾಂಗ್ರೆಸ್ ಪಕ್ಷದವರ ದುರಾಡಳಿತದಿಂದ ಬೋರ್ ವೇಲ್ ಸ್ಥಿತಿ ಆಯೋಮಯವಾಗಿದೆ.ಇದೇ ಸ್ಥಿತಿ ಎರಡು ತಿಂಗಳ ನಡೆದರೆ ಜನರು ರಸ್ತೆಗಿಳಿದು ಪ್ರತಿಭಟನೆ ಮಾಡುವ ದಿನ ಬರುತ್ತದೆ.
ಸಾರ್ವಜನಿಕರ ಕುಡಿಯುವ ನೀರನ್ನು ಕೊಡಲು ಸಾಧ್ಯವಿಲ್ಲವೆಂದರೇ ಅಧಿಕಾರ ಬಿಟ್ಟು ಇಳಿಯಿರಿ. ಎಂದು ಡಾ. ಅರುಣ್ ಸೋಮಣ್ಣ ಆಗ್ರಹಿಸಿದರು
ಇಂದು ಕ್ಷೇತ್ರದಲ್ಲಿ ಮತದಾರ ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ, ಸಮಸ್ಯೆ ಕೇಳಲು ಕಾಂಗ್ರೆಸ್ ನವರಿಗೆ ಸಮಯವಿಲ್ಲ .
ಜನರ ನಡುವೆ ಇರುವವರು ನಾವು ಸುಮ್ಮನೆ ಮನೆ ಕೂರಲು ಸಾಧ್ಯವಿಲ್ಲ ಇನ್ನು ಒಂದು ವಾರ ಹೀಗೆ ಮುಂದು ವರೆದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಯುವ ಬಿಜೆಪಿ ಮುಖಂಡ ಡಾ||ಅರುಣ್ ಸೋಮಣ್ಣರವರು ಎಚ್ಚರಿಕೆ ನೀಡಿದರು.
ಮಹಿಳಾ ಅಧ್ಯಕ್ಷೆ ರತ್ನಮ್ಮ,ಮಾಜಿ ಮಹಾನಗರ ಪಾಲಿಕೆ ಸದಸ್ಯ ಮೋಹನ್ ಕುಮಾರ್, ಬಿಜೆಪಿ ಮುಖಂಡರಾದ ಶ್ರೀಧರ್, ಕ್ರಾಂತಿರಾಜು, ಸಿದ್ದಾರ್ಥ, ಡೊಡ್ಡವೀರಯ್ಯ ಮತ್ತು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
