ಉದಯವಾಹಿನಿ, ಬೀದರ್: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕಿ ಮಂಗಲಾ ಭಾಗವತ್ ನುಡಿದರು.
ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಇಲ್ಲಿಯ ಕೃಷ್ಣ ರಿಜೆನ್ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಬ್ಬ ಮಹಿಳೆ ಇನ್ನೊಬ್ಬರು ಮಹಿಳೆಗೆ ನೆರವಾಗಬೇಕು. ಪರಸ್ಪರರ ಏಳಿಗೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಇನ್ನರ್ ವ್ಹೀಲ್ ಕ್ಲಬ್ ಮಹಿಳೆಯರ ಸವಾರ್ಂಗೀಣ ಬೆಳವಣಿಗೆಗೆ ಸಹಕರಿಸುತ್ತಿದೆ. ಹೊಲಿಗೆ ಯಂತ್ರ ವಿತರಣೆ, ಸ್ವ ಉದ್ಯೋಗ ತರಬೇತಿ, ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮೊದಲಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಶ್ಲಾಘಿಸಿದರು.
ಪೆÇೀಸ್ಟ್ ಮೆನ್ ಹಾಗೂ ಮಲ್ಟಿ ಟಾಸ್ಕ್ ಸ್ಟಾಫ್ (ಎಂಟಿಎಸ್) ಹುದ್ದೆಗಳಲ್ಲಿ ಹಿಂದೆ ಬಹುತೇಕ ಪುರುಷರೇ ಇರುತ್ತಿದ್ದರು. ಈಗ ಈ ಹುದ್ದೆಗಳಲ್ಲಿ ಮಹಿಳೆಯರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ತಾವು ಮನಸ್ಸು ಮಾಡಿದ್ದಲ್ಲಿ ಯಾವ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಬಹುದು ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಅನಿತಾ ಚಿಂತಾಮಣಿ ನುಡಿದರು.
ಅಂಚೆ ಇಲಾಖೆಯ ಮಂಜುಳಾ ಮಾತನಾಡಿದರು. ಅಂಚೆ ಇಲಾಖೆ ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಬಡ ಮಹಿಳೆ ಸಾಧನ ಅವರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು.
ಮಂಜುಳಾ ಮೂಲಗೆ ಸ್ವಾಗತಿಸಿದರು. ಸುನಯನ ಗುತ್ತಿ ನಿರೂಪಿಸಿದರು. ಕವಿತಾ ಪ್ರಭ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!